ಹೈದರಾಬಾದ್: ತಂದೆ ಜೊತೆ ಗುಡಿಸಲಿನಲ್ಲಿ ಮಲಗಿದ್ದ ಒಂದು ವರ್ಷ ಮಗು ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ತಿಂದಿರುವ ಘಟನೆ ತೆಲಂಗಾಣದ ಶಂಶಾಬಾದ್ನಲ್ಲಿ ನಡೆದಿದೆ.
ಕೆ. ನಾಗರಾಜು (1) ಮೃತಪಟ್ಟ ಮಗು. ಮಗುವಿನ ತಂದೆ ಸೂರ್ಯಕುಮಾರ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಶಂಶಾಬಾದ್ನ ರಾಜೀವ್ ಗೃಹಕಲ್ಪ ಸಂಕೀರ್ಣದ ಬಳಿ ಗುಡಿಸಲಿನಲ್ಲಿ ಹಿರಿಯ ಮಗನಾದ ನಾಗರಾಜು ಮತ್ತು 20 ದಿನದ ಮಗುವಿನ ಜೊತೆ ಮಲಗಿದ್ದ. ಈ ವೇಳೆ ಬೀದಿ ನಾಯಿಗಳ ಗುಂಪು ಗುಡಿಸಲಿಗೆ ನುಗ್ಗಿ ಮಕ್ಕಳ ಮೇಲೆ ದಾಳಿ ನಡೆಸಿವೆ
ತಡರಾತ್ರಿ 1:30 ರ ಹೊತ್ತಿಗೆ ಸೂರ್ಯಕುಮಾರ್ನನ್ನು ಸ್ಥಳೀಯರು ಎಬ್ಬಿಸಿ ಬೀದಿ ನಾಯಿಗಳ ಗುಂಪು ಮಗುವಿನ ಮೇಲೆ ದಾಳಿ ನಡೆಸಿ ತಿನ್ನುತ್ತಿದ್ದವು ಎಂದು ತಿಳಿಸಿದ್ದಾರೆ. ವಿಷಯ ತಿಳಿದ ಸೂರ್ಯ ಹೋಗಿ ನೋಡಿದಾಗ ಮಗು ನಾಯಿಗಳ ಪಾಲಾಗಿತ್ತು.