ಒಮಾನ್ ಸಾಗರ ಪ್ರದೇಶದಲ್ಲಿ ತೈಲ ಸಾಗಣೆ ಹಡಗು ಮಗುಚಿಬಿದ್ದ ಪರಿಣಾಮ 13 ಭಾರತೀಯರು ಸೇರಿದಂತೆ 16 ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಸಾಗರ ಭದ್ರತಾ ಕೇಂದ್ರ ಮಾಹಿತಿ ನೀಡಿದೆ.
ಒಮಾನ್ನ ಪ್ರಮುಖ ಬಂದರು ‘ಡುಗ್ಮ್’ನಿಂದ ಹೊರಟಿದ್ದ ‘ಪ್ರೆಸ್ಟೀಜ್ ಪಾಲ್ಕನ್’ ಹಡಗು ಪಲ್ಟಿಯಾಗಿದೆ. ಈ ವೇಳೆ ನಾಪತ್ತೆಯಾಗಿರುವ ಸಿಬ್ಬಂದಿ ಪೈಕಿ ಮೂವರು ಶ್ರೀಲಂಕನ್ನರು ಎನ್ನಲಾಗಿದೆ.
ಪೂರ್ವ ಆಫ್ರಿಕಾದ ಕಾಮೋರ್ಸ್ ದೇಶದ ತೈಲ ಟ್ಯಾಂಕರ್ ಇದರಲ್ಲಿತ್ತು ಎಂದು ಸಾಗರ ಭದ್ರತಾ ಕೇಂದ್ರ ರಾಯಿಟರ್ಸ್ಗೆ ತಿಳಿಸಿದೆ.
ಒಮನ್ನ ಡುಕ್ಮ್ ಬಂದರಿನಿಂದ 25 ನಾಟಿಕಲ್ ಮೈಲ್ ದೂರದಲ್ಲಿ ಹಡಗು ಮುಳುಗಿದೆ. ಪ್ರೆಸ್ಟೀಜ್ ಫಾಲ್ಕನ್ ಹೆಸರಿನ ಹಡಗನ್ನು 2007 ರಲ್ಲಿ ನಿರ್ಮಾಣ ಮಾಡಿದ್ದು 117 ಮೀಟರ್ ಉದ್ದವಿದೆ. ನಾಪತ್ತೆಯಾಗಿರುವ ಸಿಬ್ಬಂದಿ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.