ಬೆಂಗಳೂರು:- ಒಂದೆಡೆ ಸಿಲಿಕಾನ್ ಸಿಟಿಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ರೆ ಮತ್ತೊಂದೆಡೆ ಕಾವೇರಿ ನೀರು ಚರಂಡಿ ಪಾಲಾಗುತ್ತಿದೆ. ಹೀಗಾಗಿ ಕಂಡು ಕಾಣದಂತಿರುವ ಅಧಿಕಾರಿಗಳ ಬೇಜವಾಬ್ದಾರಿ ತನಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಹೌದು, ಕಳೆದ ಒಂದು ವಾರದಿಂದ ನೀರು ಪೌಲ್ ಆಗ್ತಿದ್ರು ಅಧಿಕಾರಿಗಳು ತಲೆಗೇಡಿಸಿಕೊಳ್ಳುತ್ತಿಲ್ಲ. ಇದು ಯಾವುದೇ ಗೊತ್ತಿಲ್ಲದ ಪ್ರದೇಶದಲ್ಲಿ ಆಗುತ್ತಿಲ್ಲ..ದಿನನಿತ್ಯ ಸಾವಿರಾರು ಜನ ಓಡಾಡು ಜಾಗದಲ್ಲೇ ಕಾವೇರಿ ನೀರಿನ ವ್ಯರ್ಥ ಆಗುತ್ತಿದೆ. ಮೈಸೂರು ರಸ್ತೆ ಬಳಿಯ ರಾಜಕಾಲುವೆಗೆ ನೀರು ಹರಿದು ಹೋಗುತ್ತಿದೆ.
ಬೆಂಗಳೂರಿನಲ್ಲೇ ಪ್ರತಿಷ್ಠಿತ ಏರಿಯಾಗಳಲ್ಲೇ ವಾಟರ್ ಸಮಸ್ಯೆ ಕಾಡುತ್ತಿದ್ದು,ಆದ್ರು ಅಧಿಕಾರಿಗಳಿಗೆ ಮಾತ್ರ ಬುದ್ಧಿಬಂದಿಲ್ಲ. ವಾರಗಳಿಂದ ಪೌಲ್ ಆಗುತ್ತಿರುವ ನೀರಿಗೆ ಇನ್ನ ನಿರ್ವಹಣೆ ಕೂಡ ಮಾಡಿಲ್ಲ. ಸುಮ್ಮನೆ ಬಂದು ನೋಡುಕೊಂಡು ಹೋಗ್ತಾರೆ.. ಸರಿಯಾಗಿ ನೋಡಿ ಇದನ್ನ ಕಾಮಗಾರಿ ಮಾಡಿಕೊಟ್ರೆ ನಮಗೂ ನೀರು ಸಿಗುತ್ತೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.