ನಟ ಶರಣ್ ಸದ್ಯ ಸ್ಯಾಂಡಲ್ ವುಡ್ ಚಿತ್ರರಂಗದ ಸ್ಟಾರ್ ನಟ. ಅಮ್ಮ, ಅಕ್ಕ ಎಲ್ಲರು ಚಿತ್ರರಂಗದಲ್ಲಿ ಖ್ಯಾತಿ ಘಳಿಸಿದವರೇ. ಆದರೆ ಶರಣ್ ಮಾತ್ರ ಸ್ಟಾರ್ ಪಟ್ಟಗಿಟ್ಟಿಸಿಕೊಳ್ಳಲು ಸಾಕಷ್ಟು ಹರಸಾಹಸ ಪಟ್ಟಿದ್ದಾರೆ.
ಅಮ್ಮಂದಿರ ಜೊತೆಗೆ ನಾಟಕ ಕಂಪನಿಯಲ್ಲಿ ಊರು ಊರು ಸುತ್ತುತ್ತಿದ್ದ ಶರಣ್ ಹೊಸ ನಾಟಕಗಳು ಬಂದಾಗ ಆಟೋಗಳಲ್ಲಿ ಕುಳಿತು ಪ್ರಚಾರ ನಡೆಸಿದ್ದರು. ಹಾಗೆ ಸಾಗಿ ಬಂದ ಶರಣ್ ಬೆಳ್ಳಿ ತೆರೆಗೂ ಕಾಲಿಟ್ಟಿದ್ದರು. ಸದ್ಯ ಸ್ಟಾರ್ ನಟನಾಗಿ ಮಿಂಚುತ್ತಿರುವ ಶರಣ್ ತಮ್ಮ ಜೀವನದ ಸತ್ಯವನ್ನು ಹೇಳಿಕೊಂಡಿದ್ದಾರೆ. ಅದರ
ಹಾಸ್ಯ ನಾಯಕ ನಟ ಶರಣ್ ಚಿತ್ರ ಜೀವನದಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಾಗಿವೆ. ಆದರೆ, ಶರಣ್ ಸುಮ್ನೆ ಹೀರೋ ಏನೋ ಆಗಿಲ್ಲ. ಆರಂಭದ ದಿನಗಳಲ್ಲಿಯೇ ಕಷ್ಟಪಟ್ಟಿದ್ದಾರೆ. ಹಾಸ್ಯ ಮಾಡುತ್ತಲೇ ಹೊಸ ರೀತಿಯ ಎಂಟರಟೈನಮೆಂಟ್ ಕೊಟ್ಟಿದ್ದಾರೆ. ಆದರೆ, ಹಾಗೆ 99 ಸಿನಿಮಾಗಳು ಆದ್ಮೇಲೆ ಶರಣ್ ಅವರಿಗೆ ಲಕ್ ಹೊಡೆದಿತ್ತು.
ಹೌದು, ಶರಣ್ ನೂರನೇ ಸಿನಿಮಾದಲ್ಲಿಯೇ ಹೀರೋ ಆಗಿದ್ದರು. ಡೈರೆಕ್ಟರ್ ನಂದ್ ಕಿಶೋರ್ ಒಂದು ರಿಸ್ಕ್ ತೆಗೆದುಕೊಂಡಿದ್ದರು. ಶರಣ್ ಅವರನ್ನ ಹೀರೋ ಮಾಡಿ ಒಂದು ಚಿತ್ರ ಮಾಡಿದರ. ಅದುವೇ 2012 ರಲ್ಲಿ ಬಂದ Rambo ಸಿನಿಮಾ ಆಗಿತ್ತು. ಈ ಮೂಲಕವೇ ಶರಣ್ ಹೀರೋ ಆದ್ರು. ಇಲ್ಲಿಂದಲೇ ಲಕ್ ಕೂಡ ಹೊಡೆಯಿತು. ಕಾರಣ, ಈ ಚಿತ್ರವನ್ನ ಜನ ಚೆನ್ನಾಗಿಯೇ ರಿಸೀವ್ ಮಾಡಿದ್ರು.ಶರಣ್ ಈಗ ಕನ್ನಡದ ಹಾಸ್ಯ ನಾಯಕ ನಟ..! ಶರಣ್ ನಾಯಕರಾದ್ಮೇಲೆ ಮತ್ತೆ ಡೌನ್ ಆಗಲೇ ಇಲ್ಲ. ಬ್ಯಾಕ್ ಟು ಬ್ಯಾಕ್ ಹೀರೋ ಆಗಿಯೇ ಸಿನಿಮಾ ಮಾಡಿದ್ರು. ಹಿಟ್ ಮೇಲೆ ಹಿಟ್ ಚಿತ್ರ ಕೊಟ್ಟರು. ಅಧ್ಯಕ್ಷ ಸಿನಿಮಾ ಈಗಲೂ ಹಾಸ್ಯದ ಹೊನಲು ಹರಿಸುತ್ತದೆ. ವಿಕ್ಟರಿ ಸಿನಿಮಾ ಕೂಡ ಮೋಡಿ ಮಾಡಿತ್ತು. ಹಿಂಗೆ ಸಿನಿಮಾ ಮೇಲೆ ಸಿನಿಮಾ ಮಾಡಿ ಗೆದ್ದ ಶರಣ್, ತಮ್ಮ ಆರಂಭದ ದಿನಗಳನ್ನ ಈಗ ನೆನಪಿಸಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಹಾಕಿದ್ದಾರೆ. ಈ ಫೋಟೋದಲ್ಲಿ ಒಂದು ಟ್ರಕ್ ಪಕ್ಕ ನಿಂತು ಟೀ ಕುಡಿಯುತ್ತಿದ್ದಾರೆ. ಶರಣ್ ಆಗಾಗ ಹೊರಗಡೆ ಹೋಗ್ತಾನೇ ಇರ್ತಾರೆ. ರಸ್ತೆ ಪಕ್ಕ ಚಹಾ ಕೂಡ ಕುಡಿಯುತ್ತಲೇ ಇರ್ತಾರೆ.
ಸೋಷಿಯಲ್ ಮೀಡಿಯಾ ಪೇಜ್ನಲ್ಲಿ ಹಂಚಿಕೊಂಡ ಈ ಫೋಟೋದ ಜೊತೆಗೆ ಒಂದಷ್ಟು ಬದುಕಿನ ವಿಷಯ ಬರೆದುಕೊಂಡಿದ್ದಾರೆ. ಒಂದು ಕಾಲದಲ್ಲಿ ನಾನು ಲಾರಿ ಕ್ಲೀನರ್ ಆಗಿದ್ದೆ ನೋಡಿ. ಆಗ ಆ ಕೆಲಸ ಮಾಡ್ತಾನೇ ನಾನು ಲಾರಿ ಕೊಳ್ಳುವ ಕನಸು ಕಂಡಿದ್ದೇನು ಅಂತಲೂ ಬರೆದುಕೊಂಡಿದ್ದಾರೆ.
ಹಾಗೆ ತಮ್ಮ ಆ ದಿನಗಳ ಕನಸುಗಳನ್ನ ಈಗ ಹಂಚಿಕೊಂಡಿರೋ ಶರಣ್, ಹೀರೋ ಆದ್ಮೇಲೆ ಲಾರಿ ಕೊಂಡ್ರೋ ಇಲ್ವೋ ಗೊತ್ತಿಲ್ಲ. ಆದರೆ, ಲಾರಿ ಕಂಡ ಕೂಡಲೇ ಈ ಒಂದು ಹಳೆ ಕನಸನ್ನ ನೆನಪಿಸಿಕೊಂಡಿದ್ದಾರೆ. ಈ ಮೂಲಕ ಶರಣ್ ತಮ್ಮ ಜೀವನದ ಆ ದಿನಗಳನ್ನ ಮೆಲುಕು ಹಾಕಿದ್ದಾರೆ.