ಈ ಬಾರಿ ಅಕಸ್ಮಾತ್ ಇನ್ನೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ಊರೂರಿಗೆ ತಮ್ಮ ದೇವಸ್ಥಾನ ಕಟ್ಟಿಸುತ್ತಾರೆ ಎಂದು ಸಚಿವ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು. ಕಾರಟಗಿಯಲ್ಲಿ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು,
” ಪ್ರಧಾನಿ ನರೇಂದ್ರ ಮೋದಿ ತಾವೇ ದೇವರು ಎಂಬ ಮನೋಭಾವಕ್ಕೆ ಬಂದಿದ್ದಾರೆ. ಪುರಿ ಜಗನ್ನಾಥ ತಮ್ಮ ದರ್ಶನಕ್ಕೆ ಬಂದಿದ್ದ ಎನ್ನುತ್ತಾರೆ. ಹತ್ತು ವರ್ಷ ಆಡಳಿತ ನಡೆಸಿದ ಮೋದಿಯವರ ಮನೋಭಾವ ದೇವರು ಎಂಬಂತಾಗಿದೆ ” ಎಂದರು.
ಈ ಹಿಂದೆ ಬಿಜೆಪಿಯ ವಾಜಪೇಯಿ ಆಡಳಿತ ನಡೆಸಿದ್ದರು. ಆದರೆ, ಈ ರೀತಿ ವರ್ತಿಸಿದ್ದಿಲ್ಲ. ಬಿಜೆಪಿಯವರು ಅಭಿವೃದ್ಧಿ ವಿಷಯವನ್ನಿಟ್ಟುಕೊಂಡು ಚುನಾವಣೆಗೆ ಹೋಗುತ್ತಿಲ್ಲ. ಮೋದಿ ವೇದಿಕೆಯಲ್ಲಿ ಮುಸ್ಲಿಂ ವಿರೋಧಿಯಾಗಿ ಮಾತನಾಡುತ್ತಾರೆ. ಸಂದರ್ಶನದಲ್ಲಿ ಮುಸ್ಲಿಂ ಪರವಾಗಿ ಮಾತನಾಡುತ್ತಾರೆ. ಕಾಂಗ್ರೆಸ್ 55 ವರ್ಷ ಆಡಳಿತ ನಡೆಸಿದ್ದರೂ ನಾವು ಜನ ಸೇವಕರು ” ಎಂದು ತಂಗಡಗಿ ಹೇಳಿದರು.