ನವದೆಹಲಿ: ಏಕದಿನ ವಿಶ್ವಕಪ್ (Cricket World Cup 2023) ವೀಕ್ಷಣೆಗೆ ಟಿಕೆಟ್ಗಳ ನೋಂದಣಿ ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದೆ. ಆಗಸ್ಟ್ 25 ರಿಂದ ಆನ್ಲೈನ್ನಲ್ಲಿ ಟಿಕೆಟ್ಗಳನ್ನು ಖರೀಸಿದಬಹುದಾಗಿದೆ.
ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್ನ ಪರಿಷ್ಕೃತ ವೇಳಾಪಟ್ಟಿಯನ್ನು ಐಸಿಸಿ ಆಗಸ್ಟ್ 9 ರಂದು ಬಿಡುಗಡೆ ಮಾಡಿದೆ. ನೂತನ ವೇಳಾಪಟ್ಟಿಯಲ್ಲಿ ಐಸಿಸಿ ಒಟ್ಟು 9 ಪಂದ್ಯಗಳ ದಿನಾಂಕವನ್ನು ಬದಲಾಯಿಸಿದೆ. ಈ 9 ಪಂದ್ಯಗಳಲ್ಲಿ ಟೀಂ ಇಂಡಿಯಾದ 2 ಪಂದ್ಯಗಳು ಸೇರಿದ್ದರೆ, ಪಾಕಿಸ್ತಾನದ 3 ಪಂದ್ಯಗಳು ಸೇರಿವೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 15 ರಂದು ನಡೆಯಬೇಕಿದ್ದ ಭಾರತ (Team India) ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಈಗ ಅಕ್ಟೋಬರ್ 14 ರಂದು ನಡೆಯಲಿದೆ. ಹಾಗೆಯೇ ನವೆಂಬರ್ 12 ರಂದು ನಡೆಯಬೇಕಿದ್ದ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯ ನವೆಂಬರ್ 11 ರಂದು ನಡೆಯಲಿದೆ. ಪಂದ್ಯಗಳ ದಿನಾಂಕಗಳ ಬದಲಾವಣೆಯ ಮಾಹಿತಿ ಜೊತೆಗೆ ವಿಶ್ವಕಪ್ ಪಂದ್ಯಗಳ ಟಿಕೆಟ್ ಮಾರಾಟದ ಬಗ್ಗೆಯೂ ಐಸಿಸಿ ಮಾಹಿತಿ ಹಂಚಿಕೊಂಡಿದೆ.
ಕ್ರಿಕೆಟ್ ಅಭಿಮಾನಿಗಳು 2 ರೀತಿಯಲ್ಲಿ ಟಿಕೆಟ್ ಖರೀದಿಸಬಹುದು. ಟಿಕೆಟ್ಗಳು ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಲಭ್ಯವಿರುತ್ತವೆ. ಆನ್ಲೈನ್ನಲ್ಲಿ ಟಿಕೆಟ್ಗಳನ್ನು ಐಸಿಸಿ ವೆಬ್ಸೈಟ್ನಿಂದ ಖರೀದಿಸಬಹುದಾಗಿದ್ದು, ಆಗಸ್ಟ್ 25 ರಿಂದ ಆನ್ಲೈನ್ ಟಿಕೆಟ್ ಮಾರಾಟ ಆರಂಭವಾಗಲಿದೆ. ಆದಾಗ್ಯೂ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ಟಿಕೆಟ್ಗಳನ್ನು ಸೆಪ್ಟೆಂಬರ್ 15 ರಿಂದ ಖರೀದಿಸಬಹುದಾಗಿದೆ.