ಬೆಂಗಳೂರು:- ಕೋಲ್ಕತ್ತ ವೈದ್ಯಯ ಹತ್ಯೆ ಖಂಡಿಸಿ IMA ಪ್ರತಿಭಟನೆಗೆ ಕರೆ ಕೊಟ್ಟಿದ್ದು, ಇಂದು ಕರ್ನಾಟಕದಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಓಪಿಡಿ ಸೇವೆ ಬಂದ್ ಆಗಿದೆ.
ಇನ್ನೂ OPD ಕ್ಲೋಸ್ ಹಿನ್ನೆಲೆ, ಖಾಸಗಿ ಆಸ್ಪತ್ರೆಗಳಿಗೆ ಬಂದು ರೋಗಿಗಳು ರಿಟರ್ನ್ ಆಗುತ್ತಿದ್ದಾರೆ. ಡಯಾಲಿಸಿಸ್ ಸಿಗದೇ ರೋಗಿಗಳು ಪರದಾಟ ನಡೆಸಿದ್ದಾರೆ. ರಾಜಾಜಿನಗರ ಸುಗುಣ ಆಸ್ಪತ್ರೆಗೆ ಗೊರವನಹಳ್ಳಿ ತುಮಕೂರು ಇಂದ ಡಯಾಲಿಸಿಸ್ ರೋಗಿಗಳು ಬಂದಿದರು. OPD ಬಂದ್ ಹಿನ್ನೆಲೆ ವಾಪಸ್ ಆಗಿದ್ದಾರೆ.
ನಿನ್ನೆ ರಾತ್ರಿಯೇ ಬೆಂಗಳೂರಿಗೆ ಬಂದಿದ್ದರು. ಆದ್ರೆ ಪ್ರೊಟೆಸ್ಟ್ ಇರೋ ಕಾರಣ ಸೋಮವಾರ ಬರಲು ಸಿಬ್ಬಂದಿ ಹೇಳಿದ್ದಾರೆ.
ಪಾಪ ಅವರು ಪ್ರತಿಭಟನೆ ಮಾಡ್ತಾ ಇದ್ದಾರೆ. ಿಷಯ ಗೊತ್ತಿಲ್ಲದೆ ಬಂದಿದ್ದೇವೆ . ಏನು ಮಾಡೋಕೆ ಆಗಲ್ಲ ಎಂದು ರೋಗಿಗಳು ವಾಪಸ್ ಹೋಗಿದ್ದಾರೆ