ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (MAHE) ಸಂಸ್ಥೆಯ ಓಪನ್ ಹೌಸ್ (Open House) ಕಾರ್ಯಕ್ರಮ ಏ.6 ರಂದು ನಡೆಯಲಿದೆ.
ಈ ಕಾರ್ಯಕ್ರಮ ತುಂಬ ವಿಶಿಷ್ಟವಾಗಿದ್ದು, ಕ್ರಿಯಾತ್ಮಕತೆಗೆ ಪ್ರಾಶಸ್ತ್ಯ ಇರುತ್ತದೆ. ಈ ಸಂಸ್ಥೆಯಲ್ಲಿ ಇರುವಂಥ ವ್ಯಾಪಕವಾದ ಶೈಕ್ಷಣಿಕ ಕೋರ್ಸ್ ಬಗೆಗಿನ ವಿವರಗಳು, ಇಲ್ಲಿನ ಅತ್ಯಾಧುನಿಕವಾದ ಮೂಲಸೌಕರ್ಯ ಹಾಗೂ ಕ್ಯಾಂಪಸ್ ಒಳಗೆ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯ, ಸವಲತ್ತು ಹಾಗೂ ಸಂಸ್ಥೆಯಲ್ಲಿ ವಿದ್ಯಾರ್ಥಿ ಜೀವನ ಹೇಗಿರುತ್ತದೆ ಎಂಬುದನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುತ್ತದೆ.
ಬೌದ್ಧಿಕ ಸ್ಪರ್ಧೆಯ ಮೂಲಕ ಶೈಕ್ಷಣಿಕ ಉತ್ಕೃಷ್ಟತೆಯನ್ನು ಉತ್ತೇಜಿಸುವ ಉದ್ದೇಶ ಸಹ ಇದೆ. ಪೋಷಕರಿಗೆ ತಮ್ಮ ಮಕ್ಕಳನ್ನು ಈ ಸಂಸ್ಥೆಗೆ ಸೇರಿಸಬೇಕು ಎಂಬ ಉದ್ದೇಶ ಇದ್ದಲ್ಲಿ ತಾವೇ ಖುದ್ದಾಗಿ ಇಲ್ಲಿನ ಸಮಗ್ರ ಕಲಿಕಾ ವಾತಾವರಣದ ಬಗ್ಗೆ ತಿಳಿಯುವುದಕ್ಕೆ ಈ ಕಾರ್ಯಕ್ರಮದ ಅತ್ಯುತ್ತಮ ಅವಕಾಶ ಒದಗಿಸುತ್ತದೆ.
ಬೆಂಗಳೂರಿನ ಕ್ಯಾಂಪಸ್ನಲ್ಲಿ (Bengaluru Campus) ಏ.6 ರ ಬೆಳಗ್ಗೆ 9:30ಕ್ಕೆ ಓಪನ್ ಹೌಸ್ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಈ ಕಾರ್ಯಕ್ರಮದಲ್ಲಿ ಸಂವಾದ ಕಾರ್ಯಾಗಾರಗಳು, ರಸಪ್ರಶ್ನೆ ಮತ್ತು ವೃತ್ತಿ ಬದುಕಿನ ಮೇಲೆ ಕೇಂದ್ರೀಕರಿಸಿದಂತೆ ಕೆರಿಯರ್ ಮೌಲ್ಯಮಾಪನ ಪರೀಕ್ಷೆ ಇನ್ನೂ ಹಲವು ಉಪಯುಕ್ತ ಚಟುವಟಿಕೆಗಳು ನಡೆಯಲಿದೆ.
ಬೆಂಗಳೂರಿನ ಮಣಿಪಾಲ್ ಅಕಾಡೆಮಿಯಲ್ಲಿ (Bengaluru Manipal Academy) ಪ್ರವೇಶಾತಿ ವಿಭಾಗದ ಉಪನಿರ್ದೇಶಕರಾದ ಗೌರವ ಯಾದವ್ ಅವರಿಂದ ಮಧ್ಯಾಹ್ನ 1:30ಕ್ಕೆ ಸ್ವಾಗತ ಪ್ರಸ್ತುತಿ ಮತ್ತು ಪ್ರಶ್ನೋತ್ತರ ಅವಧಿ ನಡೆಯಲಿದೆ. ಆ ನಂತರ ಸಂಸ್ಥೆಯ ಪ್ರೊ. ಚಾನ್ಸಲರ್ ಆಗಿರುವ ಪ್ರೊ ಮಧು ವೀರರಾಘವನ್ ಅವರಿಂದ ಮಾತುಕತೆ ನಡೆಯಲಿದೆ. ದಿನದ ಕೊನೆಗೆ ಸ್ಟ್ಯಾಂಡ್ ಅಪ್ ಕಮೆಡಿಯನ್ ಕೆನ್ನಿ ಸೆಬಾಸ್ಟಿಯನ್ ಅವರ ಕಾರ್ಯಕ್ರಮ ಇರಲಿದೆ.