ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆಪರೇಷನ್ ಚಿರತೆಗೆ ಭಾರೀ ಕಾರ್ಯಾಚರಣೆ ನಡೆಯುತ್ತಿದೆ. ಇದೀಗ ಚಿರತೆ ಸೆರೆಹಿಡಿಯಲು ಮೈಸೂರಿನಿಂದ ಎಕ್ಸ್ ಪರ್ಟ್ ತಂಡವೊಂದು ಬಂದಿದೆ.
ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಚಿರತೆ (Operation Cheetah) ಓಡಾಟ ನಡೆಸಿದ್ದು, ರಾತ್ರಿ ಸುಮಾರು 12.30ಕ್ಕೆ ಎಂಟ್ರಿ ಆಗಿರುವ ಶಂಕೆ ವ್ಯಕ್ತವಾಗಿದೆ. ಪೆÇಲೀಸ್ ನೈಟ್ ಬೀಟ್ ವೇಳೆ ಚಿರತೆ ಕಾಣಿಸಿಕೊಂಡಿದೆ. ಖಾಲಿ ಬಿಲ್ಡಿಂಗ್ ಮುಂಭಾಗದಲ್ಲಿ ಚಿರತೆ ಓಡಿದೆ. ಸದ್ಯ ಬಿಲ್ಡಿಂಗ್ ಒಳಗಡೆಯೇ ಚಿರತೆ ಇರುವ ಶಂಕೆ ಇದೆ. ಹೀಗಾಗಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಎರಡು ಬೋನ್ ಇಟ್ಟು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಲೆಪರ್ಡ್ ಟಾಸ್ಕ್ ಫೆÇೀರ್ಸ್ನಿಂದ ಆಪರೇಷನ್ ಚಿರತೆ ಕಾರ್ಯಾಚರಣೆ ನಡೆಯುತ್ತಿದೆ. ಅರವಳಿಕೆ ನೀಡಿ ಚಿರತೆಯನ್ನು ಸಿಬ್ಬಂದಿ ಸೆರೆ ಹಿಡಿಯಲಿದ್ದು, ಇದಕ್ಕಾಗಿ ವೈದ್ಯರ ತಂಡ ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ. ಗನ್ ಮೂಲಕ ಅರವಳಿಕೆ ಚುಚ್ಚುಮದ್ದನ್ನು ವೈದ್ಯರು ನೀಡಲಿದ್ದಾರೆ. ಸೆರೆ ವೇಳೆ ಚಿರತೆ ದಾಳಿ ಮಾಡುವ ಆತಂಕ ಹಿನ್ನೆಲೆಯಲ್ಲಿ ಭಾರೀ ಎಚ್ಚರಿಕೆ ಕೂಡ ವಹಿಸಲಾಗಿದೆ