ಹು-ಧಾ ಮೇಯರ್ ಚುನಾವಣೆಯಲ್ಲಿ ಆಪರೇಷನ್ ಕಾಂಗ್ರೆಸ್ ಭೀತಿ ಶುರುವಾಗಿದ್ದು, ದಾಂಡೇಲಿ ರೆಸಾರ್ಟ್ಗೆ ಪಾಲಿಕೆಯ 39 ಬಿಜೆಪಿ ಸದಸ್ಯರು ತೆರಳಿದ್ದಾರೆ. ಹು-ಧಾ ಮಹಾನಗರ ಪಾಲಿಕೆ ಗದ್ದುಗೆ ಹಿಡಿಯಲು ಕಾಂಗ್ರೆಸ್ ಕಸರತ್ತು ನಡೆಸಿದಿದ್ದು, ಪಾಲಿಕೆ ಸದಸ್ಯರಾದ ಸುರೇಶ್ ಬೇದ್ರೆ, ಉಪಮೇಯರ್ ಉಮಾ ಮುಕುಂದ, ಪಕ್ಷೇತರ ಸದಸ್ಯೆ ಚಂದ್ರಿಕಾ ಮೇಸ್ರ್ತಿ ಸೇರಿದಂತೆ ಅನೇಕ ಬಿಜೆಪಿ ಸದಸ್ಯರು ಮತ್ತು ಬಿಜೆಪಿ ಬೆಂಬಲಿಸಿದ ಪಕ್ಷೇತರರಿಗೆ ಆಮೀಷ ಒಡ್ಡುತ್ತಿದ್ದಾರೆಂಬ ಭೀತಿ ಶುರುವಾಗಿದ್ದು, ಮಾಜಿ ಸಿಎಂ ಶೆಟ್ಟರ್, ಸಚಿವ ಲಾಡ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ವಿನಯ್ ಕುಲಕರ್ಣಿಗೆ ಕಾಂಗ್ರೆಸ್ನ ಹೈಕಮಾಂಡ್ ಟಾಸ್ಕ್ ನೀಡಿದೆ.