ವಿಜಯಪುರ ಜಿಲ್ಲೆಯಲ್ಲು ಸಿಂದಗಿ ತಾಲೂಕಿನಿಂದ ಬೇರ್ಪಟ್ಟ ಆಲಮೇಲ ಹೊಸ ತಾಲೂಕಾಗಿ ನಿರ್ಮಾಣಗೊಂಡಿದೆ. ಆದ್ರೆ ಹೊಸ ತಾಲೂಕಿಗೆ ಹಳ್ಳಿಗಳ ಸೇರ್ಪಡೆಯನ್ನ ಅವೈಜ್ಞಾನಿಕವಾಗಿ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಆಲಮೇಲ ಹೊಸ ತಾಲೂಕಾಗಿ ಘೋಷಣೆ ಮಾಡಿದ ಬಳಿಕ ಗಬಸಾವಳಗಿ ಗ್ರಾಮವನ್ನ ಆಲಮೇಲ ತಾಲೂಕಿಗೆ ಸೇರ್ಪಡೆ ಮಾಡಿದ್ದಾರೆ.
ಆದ್ರೆ ಗಬಸಾವಳಗಿ ಗ್ರಾಮದಿಂದ ಆಲಮೇಲ ತಾಲೂಕಾಕೇಂದ್ರ ಬರೊಬ್ಬರಿ 40 ಕಿ.ಮೀಟರ್ ಆದ್ರೆ ಸಿಂದಗಿ ಕೇವಲ 14 ಕೀ.ಮೀಟರ ದೂರದಲ್ಲಿದೆ. ಆದ್ರೆ ಗಬಸಾವಳಗಿಯನ್ನ ಸಿಂದಗಿಯಲ್ಲಿ ಉಳಿಸಿಕೊಳ್ಳುವ ಬದಲಿಗೆ ಆಲಮೇಲ ತಾಲೂಕಿಗೆ ಸೇರ್ಪಡೆ ಮಾಡಲಾಗಿದೆ. ಇದು ಗಬಸಾವಳಗಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.