ಕೋಲಾರ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ ಸಂಬಂಧ ಮಾನ್ಯ ಚುನಾವಣಾ ಆಯೋಗದಿಂದ ಚುನಾವಣಾ ಪ್ರಕ್ರಿಯೆಗಳ ಅಧಿಸೂಚನೆ ಹೊರಡಿಸಲಾಗಿರುತ್ತದೆ. ಅದರಂತೆ, ದಿನಾಂಕ: 13/04/2023 ರಿಂದ 20/04/2023 ರ ವರೆಗೆ ನಾಮಪತ್ರ ಸ್ವೀಕೃತಿ, ದಿನಾಂಕ: 21/04/2023 ರಂದು ನಾಮಪತ್ರ ಪರಿಶೀಲನೆ ದಿನಾಂಕ: 24/04/2023 ರಂದು ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನಾಂಕವಾಗಿರುತ್ತದೆ. ಮತದಾನವು ದಿನಾಂಕ: 10/05/2023 ರಂದು ಹಾಗೂ ಮತ ಎಣಿಕೆ 13/05/2023 ರಂದು ನಡೆಯಲಿದೆ ಎಂದು ಕೋಲಾರ ಉಪ ವಿಭಾಗಾಧಿಕಾರಿಗಳು ಹಾಗೂ ನಂ: 148-ಕೋಲಾರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಾದ ವೆಂಕಟಲಕ್ಷ್ಮೀ ಅವರು ತಿಳಿಸಿದರು.
ಕೋಲಾರ ತಾಲ್ಲೂಕು ಕಛೇರಿ ನ್ಯಾಯಾಲಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಮಾನ್ಯ ಚುನಾವಣಾ ಆಯೋಗದಿಂದ ನಂ: 148-ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಉಪವಿಭಾಗಾಧಿಕಾರಿಗಳು, ಕೋಲಾರ ಉಪವಿಭಾಗ, ಕೋಲಾರ (ಮೊ: 8105595859) ಇವರನ್ನು ಚುನಾವಣಾಧಿಕಾರಿಯನ್ನಾಗಿ ಹಾಗೂ ತಹಸೀಲ್ದಾರ್, ಕೋಲಾರ ತಾಲ್ಲೂಕು (ಮೊ: 9902229213) ರವರನ್ನು ಸಹಾಯಕ ಚುನಾವಣಾಧಿಕಾರಿಗಳನ್ನಾಗಿ ನೇಮಕಾತಿ ಮಾಡಲಾಗಿದೆ.
ನಂ: 148-ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಕೋಲಾರ ಕಸಬಾ, ವೇಮಗಲ್, ನರಸಾಪುರ, ವಕ್ಕಲೇರಿ ಹೋಬಳಿಗಳು ಸೇರಿರುತ್ತದೆ. ಕ್ಷೇತ್ರದಲ್ಲಿ ಒಟ್ಟು 284 ಮತಗಟ್ಟೆಗಳಿದ್ದು, ಈ ಪೈಕಿ 72 ಸೂಕ್ಷ್ಮ ಸಾಮಾನ್ಯ 212 ವರ್ನಲಬಲಿಟಿ ಮತಗಟ್ಟೆಗಳಿರುತ್ತದೆ. ಗಂಡು 118159 ಹೆಣ್ಣು 120238 ಇತರೆ 55 ಒಟ್ಟು 238452 ಮತದಾರರಿರುತ್ತಾರೆ. ಸೆಕ್ಸ್ ರೇಷಿಯೋ 1017 ಇರುತ್ತದೆ. ವಿಕಲಚೇತನ ಮತದಾರರು ಗಂಡ 1433, ಹೆಣ್ಣು 942 ಇತರೆ 1 ಒಟ್ಟು 2376. ಮಾನ್ಯ ಚುನಾವಣಾ ಆಯೋಗದ ನಿದೇರ್ಶನದಂತೆ ಈ ಬಾರಿ ವಿಕಲಚೇತನ ಹಾಗೂ ಹಿರಿಯ ನಾಗರಿಕರು 80+ ಮತದಾರರಿಗೆ ಅಂಚೆ ಮೂಲಕ ಮತ ಚಲಾಯಿಸಲು ಅನುವು ಮಾಡಿಕೊಡಲಾಗಿದೆ. ಇದರಂತೆ ಹಿರಿಯ ನಾಗರಿಕರು ಗ: 2290 ಹೆ: 3276 ಒಟ್ಟು 5566 ಮತದಾರರಿರುತ್ತಾರೆ. ಯುವ ಮತದಾರರು 5882 ಇರುತ್ತಾರೆ.
ಚುನಾವಣೆಗೆ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು, ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ನಮ್ಮ ಕ್ಷೇತ್ರಕ್ಕೆ ಒಟ್ಟು 312 ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, 312 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಹಾಗೂ 624 ಮತಗಟ್ಟೆ ಅಧಿಕಾರಿಗಳು ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ.
ಮತಗಟ್ಟೆ ಅಧಿಕಾರಿಗಳಿಗೆ 2 ಹಂತದ ತರಬೇತಿಯನ್ನು ಸರ್ಕಾರಿ ಮಹಿಳಾ ಕಾಲೇಜು, ಕೋಲಾರ ಇಲ್ಲಿ ಏರ್ಪಡಿಸಲಾಗಿದೆ.
ನೀತಿ ಸಂಹಿತೆ ಜಾರಿ ಹಾಗೂ ಚುನಾವಣಾ ಅಕ್ರಮಗಳನ್ನು ತಡೆಯಲು 25 ಸೆಕ್ಟರ್ ಅಧಿಕಾರಿಗಳನ್ನು ಹಾಗೂ 6 ತಂಡಗಳನ್ನು. ಇದನ್ನು ಹೊರತು ಪಡಿಸಿ ಎಸ್.ಎಸ್.ಟಿ / ಎಂ.ಸಿ.ಎಂ.ಸಿ ತಂಡಗಳನ್ನು ಸಹಾ ನೇಮಕಾತಿ ಮಾಡಲಾಗಿದೆ. ಈ ಸಂಬಂಧ ಪ್ರಸ್ತುತ 3 ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆ. ಕ್ಯಾಲನೂರು, ಮೂರಾಂಡಹಳ್ಳಿ ಮತ್ತು ರಾಮಸಂದ್ರ ಹೆಚ್ಚುವರಿಯಾಗಿ 1 ಚೆಕ್ ಪೋಸ್ಟ್ ಪ್ರಗತಿಯಲ್ಲಿದೆ.
ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಸ್ಥಳವನ್ನಾಗಿ ಸರ್ಕಾರಿ ಜೂನಿಯರ್ ಕಾಲೇಜು ಇಲ್ಲಿ ಏರ್ಪಡಿಸಿದೆ. ತಾಲ್ಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗಳ ಕಛೇರಿಯನ್ನು ತೆರೆಯಲಾಗಿದ್ದು, ನಾಮಪತ್ರಗಳನ್ನು ಚುನಾವಣಾಧಿಕಾರಿಗಳ ಕಛೇರಿಯಿಂದ ಪಡೆಯಬಹುದಾಗಿರುತ್ತದೆ. ಹಾಗೂ ನಿಗಧಿತ ಅವಧಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿರುತ್ತದೆ.
ನೀತಿ ಸಂಹಿತೆಯು ದಿನಾಂಕ: 29/03/2023 ರಿಂದಲೇ ಜಾರಿಗೆ ಬಂದಿದ್ದು, ಚುನಾವಣಾ ಪ್ರಚಾರಗಳ ಕಾರ್ಯಕ್ರಮಗಳನ್ನು ನಡೆಸಲು 24 ಗಂಟೆ ಮುಂಚಿತವಾಗಿ ಚುನಾವಣಾಧಿಕಾರಿಗಳ ಕಛೇರಿಯಿಂದ ಅನುಮತಿ ಪಡೆಯಬೇಕಾಗಿರುತ್ತದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಪ್ಲಕ್ಸ್, ಬಂಟಿಂಗ್ಸ್, ಆಳವಡಿಸಲು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಂದ ಸೂಕ್ತ ಖಿಮ್ಮತ್ತು ಪಾವತಿಸಿ ಅನುಮತಿ ಪಡೆಯಬೇಕಾಗಿರುತ್ತದೆ. ತದನಂತರ ಮೈಕು, ಸ್ಪೀಕರ್ಸ್ ಹಾಗೂ ಡಿ.ಜೆ. ಅಳವಡಿಸಲು ಅರಕ್ಷ ಇಲಾಖೆಯಿಂದ ಅನುಮತಿ ಪಡೆಯಬೇಕಾಗಿರುತ್ತದೆ. ಕಾರ್ಯಕ್ರಮ ನಡೆಸಲು ಸ್ಥಳದ ಮಾಲಿಕರಿಂದ ಒಪ್ಪಿಗೆ ಪತ್ರ ಸರ್ಕಾರಿ ಜಾಗವಾಗಿದ್ದಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪತ್ರಪಡೆದಿರಬೇಕಾಗಿರುತ್ತದೆ. ಪ್ರಚಾರಕ್ಕೆ ಬಳಸುವ ಕರಪತ್ರಗಳನ್ನು ಮುದ್ರಿಸುವ ಸಮಯದಲ್ಲಿ ಕರಪತ್ರಗಳ ಮುದ್ರಿಸುವ ಒಟ್ಟು ಸಂಖ್ಯೆ ಮತ್ತು ಮುದ್ರಣಾಲಯದ ವಿವರಗಳನ್ನು ನಮೂದಿಸಬೇಕಾಗಿರುತ್ತದೆ.
ಚುನಾವಣಾ ಪ್ರಚಾರಕ್ಕಾಗಿ ಧಾರ್ಮಿಕ ಸಂಸ್ಥೆಗಳನ್ನು ಉಪಯೋಗಿಸುವಂತಿಲ್ಲ. ಧರ್ಮ, ಜಾತಿ ಉಪಯೋಗಿಸಿಕೊಂಡು ಪ್ರಚಾರ ಮಾಡುವಂತಿಲ್ಲ ಹಾಗೂ ಇದಕ್ಕೆ ದಕ್ಕೆ ತರುವಂತೆ ನಡೆದುಕೊಳ್ಳುವಂತಿಲ್ಲ. ಮತದಾರರಿಗೆ ಯಾವುದೇ ಆಮೀಶಗಳ ನೀಡುವಂತಿಲ್ಲ. ಪ್ರಚಾರಕ್ಕೆ ಬಳಸುವ ವಾಹನಗಳಿಗೆ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಬಹುದಾಗಿರುತ್ತದೆ. ಒಬ್ಬ ಅಭ್ಯರ್ಥಿಯು ಚುನಾವಣಾ ಸಮಯದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಚುನಾವಣಾ ಆಯೋಗದಿಂದ ನಿಗದಿ ಪಡಿಸಲಾಗಿರುವ ಹಣವನ್ನು ಮೀರುವಂತಿಲ್ಲ ಎಂದು ಹೇಳಿದರು.
ಚುನಾವಣಾ ಅಕ್ರಮಗಳು ನಡೆದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಂದ ನೇಮಿಸಲಾಗಿರುವ ಕಣ್ಗಾವಲು ಪಡೆ ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ತಿಳಿಸಬಹುದಾಗಿರುತ್ತದೆ. ಮತಗಟ್ಟೆ ಸುತ್ತಲು 100 ಮಿ. ವ್ಯಾಪ್ತಿಯಲ್ಲಿ ಪ್ರಚಾರ ನಡೆಸುವುದು ನಿಷೇದಿಸಲಾಗಿದೆ. ಹಾಗೂ ಮತದಾನ ಮೊದಲು 48 ಗಂಟೆ ಒಳಗಾಗಿ ಬಹಿರಂಗ ಪ್ರಚಾರ ಮುಗಿಸಬೇಕಾಗಿರುತ್ತದೆ. ಹಾಗೂ ಮತದಾರರಲ್ಲದವರು ಕ್ಷೇತ್ರವನ್ನು ತೊರೆಯಬೇಕಾಗಿರುತ್ತದೆ. ಸರ್ಕಾರಿ ನೌಕರರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತಿಲ್ಲ ಎಂದು ತಿಳಿಸಿದರು.