ದಾವಣಗೆರೆ:-ಸಿದ್ದರಾಮಯ್ಯ ಮುಗ್ಧ, ಬಿಜೆಪಿಯವರು ರಾಜಕೀಯ ಷಡ್ಯಂತ್ರ ಮಾಡ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಪರ ಎಸ್ಎಸ್ ಮಲ್ಲಿಕಾರ್ಜುನ್ ಬ್ಯಾಟಿಂಗ್ ಮಾಡಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಿಎಂ ನಿರಪರಾಧಿ, ಬಿಜೆಪಿಯವರು ರಾಜಕೀಯ ಷ್ಯಡ್ಯಂತ್ರ ಮಾಡುತ್ತಿದ್ದಾರೆ.
ನಮ್ಮ ಮುಖ್ಯಮಂತ್ರಿಗಳು ಮುಗ್ಧರು ಆದರೆ ಲೀಗಲ್ನಲ್ಲಿ ಟಾಪ್ ಇದ್ದಾರೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡೋದಿಲ್ಲ ಎಂದು ಸಿದ್ದು ಪರ ಬ್ಯಾಟ್ ಬೀಸಿದ್ದಾರೆ.
ಲೋಕಾಯುಕ್ತದಲ್ಲಿ ಎಫ್ ಐಆರ್ ಆಗಿದೆ, ನಾವು ಲೀಗಲಿ ಫೈಟ್ ಮಾಡುತ್ತೇವೆ. ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಅರೆಸ್ಟ್ ವಾರೆಂಟ್ ಆಗಿತ್ತು, ಹಾಗಾಗಿ ಬಂಧನ ಮಾಡಿದ್ದರು. ಈಗ ಸಿಎಂ ಮೇಲೆ ಆರೋಪ ಮಾತ್ರ ಇದೆ. ಕೋರ್ಟ್ ಆದೇಶ ಹಿನ್ನಲೆ ಎಫ್ ಐಆರ್ ಆಗಿದೆ ಅಷ್ಟೆ, ಮುಂದೇ ಏನು ಮಾಡಬೇಕೆಂಬುದನ್ನ ಯೋಚನೆ ಮಾಡುತ್ತೇವೆ ಎಂದು ಹೇಳಿದರು.
ಸಿಎಂ ರಾಜೀನಾಮೆ ನೀಡಬೇಕು, ಪಕ್ಷಕ್ಕೆ ಮುಜುಗರ ಆಗಬಾರದು ಎಂದೆಲ್ಲಾ ಹೇಳಿಕೆ ನಿಡಿದ್ದ ಮಾಜಿ ಸ್ಪೀಕರ್, ಕೋಳಿವಾಡ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ್ ಅವರು, ಕೋಳಿವಾಡ್ಗೆ ವಯಸ್ಸಾಗಿದೆ, ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಈ ಬಗ್ಗೆ ನಾನು ಮಾತನಾಡೋಲ್ಲ. 136 ಜನ ಶಾಸಕರು ಗಟ್ಟಿಯಾಗಿದ್ದು ಸಿಎಂಗೆ ಬೆಂಬಲ ನೀಡಿದ್ದೇವೆ. ಯಾವುದೇ ಕಾರಣಕ್ಕೂ ಸಿಎಂ ರಾಜೀನಾಮೆ ಇಲ್ಲವೇ ಇಲ್ಲ ಎಂದು ಗಟ್ಟಿಯಾಗಿ ಹೇಳಿದರು.