ಮಂಗಳೂರು: ಫಲಿತಾಂಶ ಬಂದ 24 ಗಂಟೆ ಒಳಗಡೆ ಕಾಂಗ್ರೆಸ್ ಗ್ಯಾರಂಟಿ (Congress Guarantee) ಘೋಷಣೆ ಮಾಡೋದಾಗಿ ಹೇಳಿ ಇದೀಗ ತಡವಾಗಿ ಆದರೂ ಘೋಷಣೆ ಮಾಡಿರೋದನ್ನು ಸ್ವಾಗತಿಸುತ್ತೇನೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹೇಳಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ (Mangaluru) ಮಾತನಾಡಿದ ಅವರು ಗ್ಯಾರಂಟಿ ಈಡೇರಿಸಲು ಕಾಂಗ್ರೆಸ್ ಸರ್ಕಾರ ಹಣದ ಕ್ರೋಢೀಕರಣ ಹೇಗೆ ಮಾಡುತ್ತೆ?
ಈ ಗ್ಯಾರಂಟಿ ಎಷ್ಟು ವರ್ಷ ಇರುತ್ತೆ? ಎನ್ನುವುದರ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಅವರು ಆಗ್ರಹಿಸಿದ್ದಾರೆ. ನಿರುದ್ಯೋಗ ಭತ್ಯೆಗೆ ಮೊದಲು ಮಾನದಂಡ ಹೇಳದೆ ಈಗ ಮಾನದಂಡ ಹಾಕಿದ್ದಾರೆ. ಹಿಂದಿನ ಪಿಂಚಣಿ ಯೋಜನೆಗಳ ಗತಿ ಏನು? ರಾಜ್ಯದ ಬೊಕ್ಕಸದ ಹಣದ ಗತಿ ಏನು? ಯಾರಿಗೂ ಹೊರೆ ಆಗದಂತೆ ಹೇಗೆ ನಿಯಂತ್ರಿಸುತ್ತಾರೆ? ನಮ್ಮದು ಶ್ರೀಲಂಕಾ, ಪಾಕಿಸ್ತಾನದಂತೆ ಆರ್ಥಿಕ ಸ್ಥಿತಿ ಕುಸಿಯಬಾರದು. ಅವರು ಆದಷ್ಟು ಬೇಗ ಈ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದಿದ್ದಾರೆ.