ಬೆಂಗಳೂರು: ನಮ್ಮ ಮೆಟ್ರೋದ ಪರ್ಪಲ್ ಲೈನ್ ಮಾರ್ಗ ಮತ್ತಷ್ಟು ವಿಸ್ತಾರ ವಾಗುತ್ತದೆ. ಪರ್ಪಲ್ ಲೈನಲ್ಲಿ ಎರಡು ಹೊಸ ಮಾರ್ಗಗಳು ಉದ್ಘಾಟನೆಗೆ ಸಿದ್ದವಾಗ್ತಾಯಿವೆ. ಆ ನೂತನ ಮಾರ್ಗಗಳಲ್ಲಿ ಮೆಟ್ರೋ ರೈಲಿನ ಟ್ರಯಲ್ ರನ್ ಕೂಡ ಮುಗಿದಿದ್ದು, ರೈಲ್ವೆ ಸೆಫ್ಟಿಯಿಂದ ಪರಿಶೀಲನೆ ನಡೆಯಬೇಕಿದೆ.ಹೊಸ ಮೆಟ್ರೋ ಮಾರ್ಗಗಳ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಕಾಮಗಾರಿ ಭರದಿಂದ ಸಾಗ್ತಿದೆ.ಈಗಾಗಲೇ ನಾಲ್ಕು ದಿಕ್ಕಿನಲ್ಲಿ ಓಡಾಟ ನಡೆಸುತ್ತಿರೋ ಮೆಟ್ರೋ ಮತ್ತಷ್ಟು ವಿಸ್ತರಣೆ ಆಗಲಿದೆನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಎರಡು ಹೊಸ ಮೆಟ್ರೋ ಲೈನ್ ಗಳು ಸದ್ಯದಲ್ಲೆ ವಾಣಿಜ್ಯ ಸಂಚಾರ ಆರಂಭಿಸಲಿವೆ.
ಸೆಪ್ಟೆಂಬರ್ 15 ಬಳಿಕ ಬೈಯಪ್ಪನಹಳ್ಳಿ – ಕೆ.ಆರ್.ಪುರಂ ಹಾಗೂ ಕೆಂಗೇರಿ – ಚಲಘಟ್ಟ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಮಾಡಲಿದೆ. ಈ ಎರಡು ಮಾರ್ಗಗಳಲ್ಲಿ ಆಗಸ್ಟ್ 17 ರಿಂದ ಟ್ರಯಲ್ ರನ್ ಆರಂಭವಾಗಿದ್ದು ಸದ್ಯ ಅಂತಿಮ ಹಂತದ ಟ್ರಯಲ್ ರನ್ ಮುಗಿದಿದೆ. ಸೆಪ್ಟೆಂಬರ್ ಎರಡನೇ ವಾರದೊಳಗೆ ಸ್ಟೇಷನ್ ವರ್ಕ್, ಸಿಗ್ನಲಿಂಗ್ ವರ್ಕ್, ಟ್ರ್ಯಾಕ್ ಪ್ಯಾರಮೀಟರ್ ಸೇಫ್ಟಿ ಸೇರಿದಂತೆ ಹಲವು ಕೆಲಸಗಳು ಮುಗಿಯಲಿದೆ. ನಂತರ ರೈಲ್ವೆ ಸೇಫ್ಟಿ ತಂಡ ಬಂದು ಪರಿಶೀಲನೆ ನಡೆಸಿ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡಲಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಕೆ.ಆರ್.ಪುರಂ ವೈಟ್ ಫೀಲ್ಡ್ ಭಾಗಕ್ಕೆ ಮೆಟ್ರೋ ಆರಂಭವಾದ್ರು ರೈಲ್ವೆ ಗರ್ಡರ್ ನಿಂದಾಗಿ ಬೈಯಪ್ಪನಹಳ್ಳಿ ಕನೆಕ್ಟಿಕಟ್ ಇರಲಿಲ್ಲ. ಸದ್ಯ ಬೈಯಪ್ಪನಹಳ್ಳಿ ಬಳಿ ರೈಲ್ವೆ ಗರ್ಡರ್ ಹಾಕಲಾಗಿದ್ದು ಕೆಲಸ ಮುಗಿದಿದೆ. ಬೈಯಪ್ಪನಹಳ್ಳಿ ಕೆ.ಆರ್ ಪುರಂ ಗೆ 2.10 ಕಿಲೋಮೀಟರ್ ಇದ್ದು, ಒಂದು ನಿಲ್ದಾಣವಿದೆ. ಹಾಗೂ ಕೆಂಗೇರಿಯಿಂದ ಚಲಘಟ್ಟಗೆ 2.05 ಕಿಲೋಮೀಟರ್ ಇದ್ದು ಈ ಎರಡು ಮಾರ್ಗವೂ ಸೆಪ್ಟೆಂಬರ್ 15 ರ ಬಳಿಕ ಸಾರ್ವಜನಿಕರಿಗೆ ಮುಕ್ತವಾಗುವ ಸಾಧ್ಯತೆ ಇದೆ.. 44 ಕಿಲೋಮೀಟರ್ ಉದ್ದದ ಪರ್ಪಲ್ ಲೈನ್ ಜೋಡಿಸಲು ಈ ಹೊಸ ಮಾರ್ಗಗಳು ಆರಂಭವಾಗ್ತಾಯಿದ್ದು ಟ್ರಯಲ್ ರನ್ ಯಶಸ್ವಿಯಾಗಿದೆ.
ಸದ್ಯ ಮೆಟ್ರೋದಲ್ಲಿ ನಿತ್ಯ 6.5 ಲಕ್ಷ ಜನರು ಸಂಚಾರ ಮಾಡ್ತಾಯಿದ್ದು, ಈ ಪರ್ಪಲ್ ಲೈನ್ ನಲ್ಲಿ ವಾಣಿಜ್ಯ ಸಂಚಾರ ಆರಂಭವಾದ ಬಳಿಕ ನಿತ್ಯ 7-8 ಲಕ್ಷ ಜನರು ಪ್ರಯಾಣಿಸುವ ನಿರೀಕ್ಷೆ ಇದೆ.