ನಮ್ಮ ಪಕ್ಷದ ವರಿಷ್ಠರು ಕರೆದಿದ್ದಾರೆ..ಹಾಗಾಗಿ ನಾನು ಸಿಎಂ ಡಿಸಿಎಂ ಹೋಗ್ತಾ ಇದ್ದೀವಿ ಏನು ಚರ್ಚೆ ಅನ್ನೋದು ಗೊತ್ತಿಲ್ಲ..ನಾವೆಲ್ಲಾ ಸ್ವಯಂ ಪ್ರೇರಿತವಾಗಿ ಹೋಗ್ತಾ ಇದ್ದೀವಿ ನನಗೆ ಇಲಾಖೆ ಕೆಲಸ ಕೂಡ ಇದೆ..ಮನೆಗಳಿಗೆ ಹಣ ಕೊಡಿ ಅಂತ ಕೇಳಿದ್ವಿಅದರ ಬಗ್ಗೆ ಹೋಗ್ತಾ ಇದ್ದೀವಿ ನಾವ್ಯಾರು ಮೂಡಾ ವಿವರ ಕೊಡಲು ಹೋಗ್ತಾ ಇಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಎಂ ಡಿಸಿಎಂ ಅಜೆಂಡಾ ಏನು ಅಂತ ಗೊತ್ತಿಲ್ಲ..ಇಲ್ಲಿ ಬಂದಾಗಲೇ ಎಲ್ಲವನ್ನೂ ಹೇಳಿದ್ದೆವು ನಾವು ಇಂಡಿಯಾ ಅಲಯನ್ಸ್ ನಲ್ಲಿ ಇದ್ದೀವಿ ಬೇರೆ ರಾಜ್ಯದಲ್ಲ ರಾಜ್ಯಪಾಲರಿಂದ ಬಿಲ್ ವಾಪಸ್ ವಿಚಾರ ಸ್ವಾಭಾವಿಕವಾಗಿ ಸರ್ಕಾರ ರಾಜ್ಯ ಪಾಲರಿಗೆ ಹೊಂದಾಣಿಕೆ ಇಲ್ಲದೆ ಇದ್ದರೆ ಇಂಥ ಬೆಳವಣಿಗೆ ನಡೆಯುತ್ತೆ ಒಂದೆರಡು ಬಿಲ್ ಕ್ಲಾರಿಫಿಕೇಷನ್ ಕೇಳಿದ್ದು ಬಿಟ್ರೆ ಹೀಗೆ ಬಲ್ಕ್ ಆಗಿ ಕಳಿಸಿರಲಿಲ್ಲ ಸಾಮಾನ್ಯ ಬಿಲ್ ನೂ ವಾಪಸ್ ಕಳಿಸಿದ್ದಾರೆ..ನಮ್ಮ ಸರ್ಕಾರದ ವಿರುದ್ಧವಾಗಿ ರಾಜ್ಯಪಾಲರು ಇದ್ದಾರೆ ಅನ್ನೋದು ಸ್ಪಷ್ಟ ಎಂದರು.
ಜಿಂದಾಲ್ ಗೆ ಜಾಗ ಕೊಡುವ ವಿಚಾರ ಬಗ್ಗೆಯೂ ಮಾತನಾಡಿ, ಹಿಂದೆ ನಾವು ವಿರೋ಼ಧ ಮಾಡಿದ್ದು ನಿಜ ಕೆಲವು ಪ್ರಶ್ನೆಗಳನ್ನ ನಾವು ಕೇಳಿದ್ದೆವು ಅದಕ್ಕೆ ಕ್ಲಾರಿಫಿಕೇಷನ್ ಕೂಡ ಸಿಕ್ಕಿದೆ. ಕೋರ್ಟ್ ಕೂಡ ಆದೇಶ ಮಾಡಿದೆ..ಬೆಲೆಯಲ್ಲೂ ಕೂಡ ಒಂದಿಷ್ಟು ಕ್ಲಾರಿಟಿ ಸಿಕ್ಕಿದೆ.ಗ್ಲೋಬಲ್ ಇನ್ವೆಸ್ಟರ್ ಮಾಡ್ತೀವಿ ಪ್ರಪಂಚದಾದ್ಯಂತ ಇದರಲ್ಲಿ ಭಾಗಿಯಾಗ್ತಾರೆ..ಒಂದಿಷ್ಟು ವಿನಾಯಿತಿಗಳನ್ನ ಅವರಿಗೆ ಕೊಡ್ತೀವಿ
ನೀರು,ಜಾಗ,ವಿದ್ಯುತ್ ಹೀಗೆ ಒಂದಿಷ್ಟು ವಿನಾಯಿತಿ ಇರುತ್ತದೆ ಇರೋವ್ರನ್ನ ಉಳಿಸಿಕೊಂಡು ಹೊಸಬರನ್ನೂ ತರಬೇಕಾಗಿದೆ ನಾವು ಒಂದಿಷ್ಟು ಎನ್ಕರೇಜ್ ಮಾಡದೇ ಇದ್ರೆ ಹೇಗೆ ಡಿಸ್ಕರೇಜ್ ಮಾಡಿದ್ರೆ ರಾಜ್ಯ ಬಿಟ್ಟು ಹೋಗ್ತಾರೆ ತಮಿಳುನಾಡು ಆಂಧ್ರದಲ್ಲಿ ಫ್ರೀ ಲ್ಯಾಂಡ್ ಕೊಡ್ತಾರೆ ನಾವು ಕೊಟ್ಟಿಲ್ಲ ಅಂದ್ರೆ ಅವ್ರು ಕರೀತಾರೆ ಹಿಂದೆ ಒಂದಿಷ್ಟು ಘಟನೆ ನಡೆದಾಗ ಕಂಪನಿಗಳು ಬಿಟ್ಟು ಹೋಗ್ತೀವಿ ಅಂದ್ರು ಹಾಗಾಗಿ ಎನ್ಕರೇಜ್ ಮಾಡ್ತಾ ಇದ್ದೀವಿ
ಹಿಂದಿನ ಸರ್ಕಾರದ ಹಗರಣ ತನಿಖೆ ವಿಚಾರ ಬಗ್ಗೆ ಕೇಳಿದಾಗ, ಸುಮಾರು ಹಗರಣ ಬೆಳಕಿಗೆ ಬಂದಿವೆ ಒಂದೊಂದಾಗೆ ತನಿಖೆ ಮಾಡಲು ಮುಂದಾಗ್ತಾ ಇದ್ದೀವಿ ಒಂದು ಹಂತ ತಲುಪಿದಾಗ ತನಿಖೆ ಮಾಡಿ ಚಾರ್ಜ್ ಶೀಟ್ ಹಾಕಿದ್ದೇವೆ ತರಾತುರಿಯಲ್ಲಿ ಕೆಎಎಸ್ ಪರೀಕ್ಷೆಗೆ ಅಭ್ಯರ್ಥಿಗಳ ವಿರೋಧ ವಿಚಾರ ಈಗಾಗಲೇ 2 ಬಾರಿ ಮುಂದಕ್ಕೆ ಹಾಕಲಾಗಿದೆ..ಕೇಂದ್ರದಲ್ಲೂ ಪರೀಕ್ಷೆ ಮುಂದೂಡಲು ಕ್ಲ್ಯಾಸ್ ಆಗ್ತಿದೆಹಾಗಾಗಿ ಒಂದು ವಾರದಲ್ಲಿ ಪರೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ಗೃಹ ಸಚಿವ ಜಿ .ಪರಮೇಶ್ವರ್ ತಿಳಿಸಿದರು.