ಚಿಕ್ಕನಾಯಕನಹಳ್ಳಿ: ಅಭಿವೃದ್ಧಿ ಕಾರ್ಯ ಮಾಡಿದಕ್ಕೆ ಪ್ರತಿಫಲ ಕೊಡ್ತಾರೆ ಅಂದುಕೊಂಡಿದ್ದೆ. ಉಚಿತ ಭಾಗ್ಯದ ಮುಂದೆ ನಮ್ಮ ಕೆಲಸ ಕೊಚ್ಚಿಕೊಂಡು ಹೋಯಿತು ಎಂದು ಚುನಾವಣೆ ಬಳಿಕ ಮೊದಲ ಬಾರಿ ಜೆ.ಸಿ.ಮಾಧುಸ್ವಾಮಿ ಮೌನ ಮುರಿದಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಜೆ.ಸಿ.ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಇಡೀ ರಾಜ್ಯದಲ್ಲಿ ನನ್ನಂತೆ ಕೆಲಸ ಮಾಡಿದ ಹಲವು ಶಾಸಕರಿದ್ದಾರೆ. ಪ್ರತಿಫಲ ಸಿಗದಿರುವುದು ಕೇವಲ ಚಿಕ್ಕನಾಯಕನಹಳ್ಳಿಗೆ ಮಾತ್ರವಲ್ಲ. ಜನರಿಗೆ ಊರಿನ ಕೆಲಸ, ಕ್ಷೇತ್ರದ ತಮ್ಮ ಕೆಲಸವೆಂದು ಅನಿಸಲೇ ಇಲ್ಲ. ಕಾಂಗ್ರೆಸ್ ಕೊಡುವ ಅಕ್ಕಿ, ದುಡ್ಡೇ ಶ್ರೇಷ್ಠ ಅನಿಸಿತು. ಹೀಗಾಗಿ ಉಚಿತ ಭಾಗ್ಯದ ಮುಂದೆ ಕೆಲಸ ಕೊಚ್ಚಿಕೊಂಡು ಹೋಯಿತು ಎಂದು ಬೇಸರ ಹೊರ ಹಾಕಿದ್ದಾರೆ.