ಹುಬ್ಬಳ್ಳಿ: ನಗರದಲ್ಲಿ ನಿರ್ಮಾಣವಾಗುತಿರುವ ಮೇಲೇತುವೆ ಕಾಮಗಾರಿಗಾಗಿ ಸಿದ್ದಪ್ಪ ಕಂಬಳಿ ರಸ್ತೆಯಲ್ಲಿರುವ ಶಿವಕೃಷ್ಣ ಮಂದಿರದ ಜಾಗ ಸ್ವಾಧೀನ ಮಾಡಿ ಕೊಳ್ಳದಂತೆ ಹೈಕೋರ್ಟ್ ಧಾರವಾಡ ಪೀಠ ಆದೇಶ ನೀಡಿದೆ.
ದೇವಸ್ಥಾನದ ಪರ ವಕೀಲರಾ ಈವರೆಗೂ ಅಂತಿಮ ಅಧಿಸೂಚನೆ ಹೊರಡಿಸಿಲ್ಲ. ಪ್ರಾಥಮಿಕ ಅಧಿಸೂಚನೆ ಮತ್ತು ಯೋಜನೆಯಲ್ಲಿನ ಹಲವು ನ್ಯೂನತೆಗಳನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು’ ಎಂದು ನಾಗಪ್ರಸಾದ ಕಿಣಿ ಅವರು ತಿಳಿಸಿದರು.
ಸಮೀಕ್ಷೆ ನಡೆಸಿಲ್ಲ. ಅಲ್ಲದೆ, ಕಾಯ್ದೆಯ ಹಲವು ಅಂಶಗಳನ್ನು ಪಾಲಿಸಿಲ್ಲ. 3ಡಿ ಅಧಿಸೂಚನೆ ಹೊರಡಿಸಿ, ಭೂಸ್ವಾಧೀನ ಪಡಿಸಿಕೊಂಡ ಜಾಗಕ್ಕೆ ಪರಿಹಾರ ನೀಡಿದ ನಂತರ ಕಾಮಗಾರಿ ಆರಂಭಿಸಬೇಕಿತ್ತು. ಆದರೆ, ಅದಕ್ಕೂ ಮುನ್ನವೇ ಕಾಮಗಾರಿ ಆರಂಭಿಸಲಾಗಿದೆ’ ಎಂದು ಶ್ರೀಧರ ಪ್ರಭು ತಿಳಿಸಿದರು.
‘ನ್ಯಾಯಾಲಯವು 2023ರ ಅಧಿಸೂಚನೆಗೆ ಜೂನ್ 12ರಂದು ತಡೆಯಾಜ್ಞೆ ನೀಡಿತ್ತು. ಆ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಜೂನ್ 14ಕ್ಕೆ ಮತ್ತೊಂದು ಅಧಿಸೂಚನೆ ಹೊರಡಿಸಿದ್ದರು. ಅದನ್ನು ಪ್ರಶ್ನಿಸಿ ಮತ್ತೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಅದಕ್ಕೆ ಜುಲೈ 22ರಂದು ತಡೆಯಾಜ್ಞೆ ನೀಡಿದೆ’ ಎಂದರು. ‘
ಹೊಸ ಭೂಸ್ವಾಧೀನ ಕಾಯ್ದೆ ಅನ್ವಯ ಯೋಜನೆ ಜಾರಿಯಾ ಗುವುದಕ್ಕೂ ಮುನ್ನ ಸಾಮಾಜಿಕ ಪರಿಣಾಮಗಳ ಕುರಿತು
‘ದೇವಸ್ಥಾನದ ಭೂಸ್ವಾಧೀನ ಜಾಗವನ್ನು ಮಾಡಿಕೊಳ್ಳದಂತೆ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಅದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಭೂಸ್ವಾಧೀನ ಮಾಡಿಕೊಂಡರೆ ದೇವಸ್ಥಾನಕ್ಕೆ ಪ್ರವೇಶಿಸಲು ಜಾಗ ಇಲ್ಲದಂತಾಗುತ್ತದೆ. ಈ ಕುರಿತು ಚರ್ಚಿಸಲು ಆಗಸ್ಟ್ 10ರಂದು ಕಾನೂನು ತಜ್ಞರ ಸಭೆ ಕರೆಯಲಾಗಿದೆ. ಅವರ ಸಲಹೆ ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು’ ఎంದು ಶಿವಕೃಷ್ಣ ಮಂದಿರದ ಅಧ್ಯಕ್ಷ ನಂದನ್ ಬಳವಳ್ಳಿ ಹೇಳಿದರು.