ಪಾಕಿಸ್ತಾನವು ಹೊಸದಾಗಿ ಜಾರಿಗೆ ತರಲು ಉದ್ದೇಶಿಸಿರುವ ಭಯೋತ್ಪಾದನಾ ನಿಗ್ರಹ ಯೋಜನೆಯಾದ ‘ಅಜಮ್-ಇ-ಇಶ್ತೆಕಾಮ್’ ಯಶಸ್ಸಿಗಾಗಿ ಸಣ್ಣ ಮತ್ತು ಅತ್ಯಾಧುನಿಕ ಶಸ್ತಾಸ್ತ್ರಗಳನ್ನು ಪೂರೈಸಬೇಕು ಎಂದು ಪಾಕಿಸ್ತಾನದ ರಾಯಭಾರಿ ಮಸೂದ್ ಖಾನ್ ಅಮೆರಿಕಕ್ಕೆ ಮನವಿ ಮಾಡಿದ್ದಾರೆ.
‘ದೇಶದಲ್ಲಿನ ಉಗ್ರರ ಜಾಲವನ್ನು ನಿಷ್ಕ್ರಿಯಗೊಳಿಸಲು ಪಾಕಿಸ್ತಾನವು ‘ಅಜಮ್-ಇ-ಇಶ್ತೆಕಾಮ್’ ಕಾರ್ಯಾಚರಣೆ ಆರಂಭಿಸಿದ್ದು, ಅದಕ್ಕಾಗಿ ನಮಗೆ ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಸಂವಹನ ಸಾಧನಗಳ ಅಗತ್ಯವಿದೆ’ ಎಂದು ಖಾನ್ ಹೇಳಿದ್ದಾಗಿ ‘ಡಾನ್’ ಪತ್ರಿಕೆ ವರದಿ ಮಾಡಿದೆ.
ವಾಷಿಂಗ್ಟನ್ನ ವಿಲ್ಸನ್ ಸೆಂಟರ್ನಲ್ಲಿ ಕಳೆದ ವಾರ ನಡೆದ ಅಮೆರಿಕದ ನೀತಿ ನಿರೂಪಕರು, ವಿದ್ವಾಂಸರು, ಬೇಹುಗಾರರು ಮತ್ತು ಕಾರ್ಪೊರೇಟ್ ಮುಖಂಡರ ಸಭೆಯಲ್ಲಿ ಅವರು ಈ ಮನವಿ ಮಾಡಿದ್ದಾರೆ.