ಮುಜಫರಾಬಾದ್: ನ್ಯಾಯಾಂಗ ನಿಂದನೆ ಮಾಡಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ಸರ್ದಾರ್ ತನ್ವೀರ್ ಇಲ್ಯಾಸ್ ಅವರನ್ನು ಪ್ರಧಾನಿ ಸ್ಥಾನದಿಂದ ಮುಜಫರಾಬಾದ್ ಹೈಕೋರ್ಟ್ ಅನರ್ಹಗೊಳಿಸಲಾಗಿದ್ದು, ಇದು ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಗೆ ತೀವ್ರ ಹೊಡೆತ ನೀಡಿದೆ.
ಇಲ್ಯಾಸ್ ತಮ್ಮ ಹೇಳಿಕೆಯಲ್ಲಿ ನಾಯ್ಯಂಗ ನಿಂದನೆ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮತ್ತು ಎಜೆಕೆ ಹೈಕೋರ್ಟ್ಗೆ ವಿಚಾರಣೆಗೆ ಬರುವಂತೆ ತಿಳಿಸಿತ್ತು. ನಂತರ ನಾಯ್ಯಂಗ ನಿಂದನೆ ಆರೋಪದ ಮೇಲೆ ಅವರನ್ನು ಆಡಳಿತದಿಂದ ಅನರ್ಹಗೊಳಿಸುವಂತೆ ಆದೇಶ ನೀಡಿತ್ತು.
ನ್ಯಾಯಾಧೀಶ ಸದಾಕತ್ ಹುಸೇನ್ ರಾಜಾ ಅವರ ನಿರ್ದೇಶನದ ಪೂರ್ಣ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಪ್ರಧಾನಿ ಸಂಬಂಧಿತ ವಿಡಿಯೋಗಳನ್ನು ಪ್ರಸಾರ ಮಾಡಲಾಗಿತ್ತು. ನನ್ನ ಹೇಳಿಕೆಗಳು ನ್ಯಾಯಾಧೀಶರನ್ನು ಗಾಯಗೊಳಿಸಿದ್ದರೆ ನಾನು ಪೂರ್ಣ ಹೃದಯದಿಂದ ವಿಷಾದಿಸುತ್ತೇನೆ” ಎಂದು ಇಲ್ಯಾಸ್ ನ್ಯಾಯಾಲಯದಲ್ಲಿ ತಿಳಿಸಿದ್ದರು.