ನವದೆಹಲಿ: ಪಾಕಿಸ್ತಾನದಿಂದ ಭಾರತದೊಳಗೆ ಪ್ರವೇಶಿಸಿದ್ದ ಡ್ರೋನ್ನ್ನು ಭಾರತೀಯ ಗಡಿ ಭದ್ರತಾ ಪಡೆಯ ಸಿಬಂದಿ ಪಂಜಾಬ್ ಗಡಿಯಲ್ಲಿ ಹೊಡೆದುರುಳಿಸಿದ್ದಾರೆ.
ಭಾನುವಾರ ಮಧ್ಯರಾತ್ರಿ 2.11ರ ವೇಳೆಗೆ ಈ ಡ್ರೋನ್ ಭಾರತದೊಳಗೆ ಪ್ರವೇಶಿಸುತ್ತಿತ್ತು.
ಅಮೃತ್ಸರ ಜಿಲ್ಲೆಯ ಶಹಜಾದಾ ಗ್ರಾಮದ ಬಳಿ ಡ್ರೋನ್ ಶಬ್ದ ಕೇಳಿ ತಕ್ಷಣವೇ ಬಿಎಸ್ಎಫ್ ಸಿಬಂದಿ ಕಾರ್ಯಾಚರಣೆಗಿಳಿದು, ಶಬ್ದ ಕೇಳಿದತ್ತ ಕೂಡಲೇ ಗುಂಡು ಹಾರಿಸಿ ಹೊಡೆದುರುಳಿಸಿದ್ದಾರೆ. ಮೇಡ್ ಇನ್ ಚೀನಾದ ಕಪ್ಪು ಬಣ್ಣದ ಡ್ರೋನ್ ಇದಾಗಿದ್ದು, ಅವಶೇಷಗಳು ಶಹಜಾದ್ ಗ್ರಾಮದ ದುಸ್ಸಿ ಬಂದ್ ಬಳಿ ಪತ್ತೆಯಾಗಿದೆ. ಇನ್ನು ಪಾಕಿಸ್ತಾನ ಈ ಹಿಂದೆಯೂ ಭಾರತದತ್ತ ಅಕ್ರಮವಾಗಿ ಡ್ರೋನ್ ಕಳುಹಿಸಿತ್ತು. ಕಳೆದ ಡಿಸೆಂಬರ್ನಲ್ಲಿ ಪಂಜಾಬ್ನ ಅಮೃತಸರ್ಗೆ ಪಾಕಿಸ್ತಾನದಿಂದ ಪ್ರವೇಶಿಸಿದ್ದ ಡ್ರೋನ್ನ್ನು ಬಿಎಸ್ಎಫ್ ಸಿಬಂದಿ ಹೊಡೆದುರುಳಿಸಿದ್ದರು.
ಪಾಕಿಸ್ತಾನ ಗುಪ್ತಚರ ಇಲಾಖೆಯು ಐಎಸ್ಐ ಡ್ರೋನ್ ಮೂಲಕ ಭಾರತದಲ್ಲಿರುವ ಉಗ್ರರಿಗೆ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳನ್ನು ಕಳುಹಿಸುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿದೆ.