ಇಸ್ಲಾಮಾಬಾದ್: ಭಾರತದಲ್ಲಿ ಮುಸಲ್ಮಾನರಿಗೆ ಯಾವುದೇ ಆತಂಕವಿಲ್ಲ, ಬಹುಸಂಖ್ಯಾತರಂತೆ ಅವರೂ ಸಮಾನರಾಗಿದ್ದು, ಎಲ್ಲರಂತೆ ತಮ್ಮ ವ್ಯಾಪಾರ-ವ್ಯವಹಾರಗಳನ್ನು ನಡೆಸುತ್ತಿದ್ದಾರೆ ಎಂದು ಪಾಕಿಸ್ತಾನ ಮೂಲದ ಲೇಖಕ, ಸ್ವೀಡಿಷ್ ರಾಜಕೀಯ ತಜ್ಞ ಇಶ್ತಿಯಾಕ್ ಅಹ್ಮದ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯ ಪ್ರಸ್ತಾಪದ ಕುರಿತು ಪ್ರತಿಕ್ರಿಯಿಸಿದ್ದು, ಈ ವೇಳೆ ಏಕರೂಪ ನಾಗರಿಕ ಸಂಹಿತೆ ಸರಿಯಾದ ವಿಧಾನವೆಂದು ಬಣ್ಣಿಸಿದ್ದಾರೆ. ಮುಸಲ್ಮಾನ ಹೆಣ್ಣುಮಕ್ಕಳಿಗೆ ಅನ್ಯಾಯವಾಗಬಾರದು ಎಂದು ವಾದಿಸುವ ನಾವು, ಯುಸಿಸಿಯನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ. ದೇಶದಲ್ಲಿ ಸಮಾನವಾದ ಅಪರಾಧ ಕಾನೂನುಗಳಿವೆ, ಅದರಂತೆಯೇ ಸಮಾನ ನಾಗರಿಕ ಕಾನೂನುಗಳು ಜಾರಿಯಾಗುವುದರಲ್ಲಿ ತಪ್ಪೇನಿದೆ? ಪ್ರತ್ಯೇಕ ಸಮುದಾಯಗಳಿಗೆ ಪ್ರತ್ಯೇಕ ಕಾನೂನು ಎನ್ನುವಂತೆ ಭಾರತದಲ್ಲಿ ಅನ್ವಯಿಸಲು ಸಾಧ್ಯವಿಲ್ಲ, ಹಾಗಾಗಿ ಯುಸಿಸಿ ಜಾರಿಯ ಅಗತ್ಯವಿದೆ ಎಂದಿದ್ದಾರೆ.
ಇದನ್ನೂ ಓದಿ : ಅಂಚೆ ಕಚೇರಿ ಅಧಿಕಾರಿಗಳು ಮತ್ತು ಪೋಸ್ಟ್ ಮ್ಯಾನ್ ಗಳ ನಿರ್ಲಕ್ಷ್ಯ: ಮಹಿಳೆಯರ ಆಕ್ರೋಶ