ಕೋಲಾರ:- ಪ್ಯಾಲೆಸ್ಟೈನ್ ಬಾವುಟ ಹಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಅಂಜುಮನ್ ಸಂಸ್ಥೆ ಬಳಿ ಫ್ರೀ ಪ್ಯಾಲೆಸ್ಟೈನ್ ಧ್ವಜ ಹಾರಾಟ ಮತ್ತು ಕ್ಲಾಕ್ ಟವರ್ ಬಳಿ ಮೆರವಣಿಗೆ ಬಂದಾಗ ನಡೆದ ಗುಂಪು ಘರ್ಷಣೆ ವಿಚಾರವಾಗಿ ಪ್ರಕರಣ ದಾಖಲಾಗಿವೆ.
ಗಲಾಟೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕೋಲಾರದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಇನ್ನೂ ಈದ್ ಮಿಲಾದ್ ಮೆರವಣಿಗೆ ವೇಳೆ ಫ್ರೀ ಪ್ಯಾಲೆಸ್ಟೈನ್ ಎನ್ನುವ ಧ್ವಜ ಹಾರಾಡಿತ್ತು.
ಎಂ.ಜಿ ರಸ್ತೆಯಲ್ಲಿರುವ ಅಂಜುಮನ್ ಕಛೇರಿಯ ಬಳಿ ಧ್ವಜಾರೋಹಣ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಗಿತ್ತು. ಈ ವೇಳೆ ಮೆರವಣಿಗೆಯಲ್ಲಿ ಫ್ರೀ ಪ್ಯಾಲೆಸ್ಟೈನ್ ಎಂದು ಧ್ವಜದ ಮೇಲೆ ಬರೆಯಲಾಗಿತ್ತು. ಬರಹ ಕಾಣಿಸಿದ್ದೇ ತಡ ಕೂಡಲೇ ಪೊಲೀಸರು ಆ ಬಾವುಟವನ್ನು ತೆಗೆಸಿದ್ದಾರೆ.