ನಾವು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಹರಿಹರಕ್ಕೆ ಜಗದ್ಗುರುಗಳಾಗಿ ಪೀಠಾರೋಹಣವಾಗಿ ಇಂದಿಗೆ ಐದು ವರ್ಷಗಳು ಪೂರೈಸಿವೆ. ಈ ಕಾಲಘಟ್ಟದಲ್ಲಿ ನಮಗೆ ಸಕಲ ರೀತಿಯಿಂದಲೂ ಸಹಕಾರ ಬೆಂಬಲ ನೀಡಿದ ಸಮುದಾಯದ ಸಕಲ ಬಾಂಧವರಿಗೆ ಅಭಿನಂದನೆಗಳನ್ನೂ ಧನ್ಯವಾದಗಳನ್ನೂ ತಿಳಿಸಲು ಇಚ್ಚಿಸುತ್ತೇವೆ. ಈ ಐದು ವರ್ಷಗಳಲ್ಲಿ ಪಂಚಮಸಾಲಿ ಸಮುದಾಯ ದಿನೇದಿನೇ ಅಭಿವೃದ್ಧಿ ಹೊಂದಿದ್ದು ಎಲ್ಲರಿಗೂ ತಿಳಿದ ವಿಷಯ. ನಮ್ಮ ಸಮುದಾಯ ಹೀಗೆಯೇ ಸಮಾಜದ ಮುಂಚೂಣಿಯಲ್ಲಿ ಅದ್ಭುತ ಸಾಧನೆಗಳನ್ನು ಮಾಡುವಲ್ಲಿ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ಮಹಾಯೋಗಿನಿ ಅಕ್ಕಮಹಾದೇವಿ ಹೇಳಿದಂತೆ
“ಹುಟ್ಟಿದೆ ಶ್ರೀಗುರುವಿನ ಹಸ್ತದಲ್ಲಿ
ಬೆಳೆದೆನು ಅಸಂಖ್ಯಾತರ ಕರುಣದೊಳಗೆ
ಭಾವವೆಂಬ ಹಾಲು ಸುಜ್ಞಾನವೆಂಬ ತುಪ್ಪ
ಪರಮಾರ್ಥವೆಂಬ ಸಕ್ಕರೆಯನಿಕ್ಕಿದರು ನೋಡಾ
ಇಂತಪ್ಪ ತ್ರಿವಿಧಾಮ್ರತವನು ದಣಿಯಲೆರೆದು ಸಲಹಿದಿರೆನ್ನ
ಅಸಂಖ್ಯಾತರೆಲ್ಲರೂ ನೆರೆದು ಬಂದಿರಿ
ಬಸವಣ್ಣ ಮೆಚ್ಚಲು ಒಗತನವ ಮಾಡುವೆ
ಚೆನ್ನಮಲ್ಲಿಕಾರ್ಜುನನ ಕೈವಿಡಿದು
ನಿಮ್ಮ ತಲೆಗೆ ಹೂವ ತಹೆನಲ್ಲದೆ ಹುಲ್ಲ ತಹೆನು
ಅವಧರಿಸಿ ನಿಮ್ಮಡಿ ಶರಣಾರ್ಥಿ
ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು. ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಕ್ಷೇತ್ರ ಹರಿಹರ.