ಹುಬ್ಬಳ್ಳಿ: ಸಿಲಿಂಡರ್ ಗ್ಯಾಸ್ ಸೂರಿಕೆಯಿಂದ ಗಂಭೀರವಾಗಿ ಗಾಯಾಳಿಗೆ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಬಾರದು ಎಂದು ವೈದ್ಯರಿಗೆ ಸೂಚನೆ ಕೊಟ್ಟಿದ್ದೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು. ನಗರದಲ್ಲಿಂದು ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳು ವಿಚಾರಣೆ ಮಾಡಿದ ನಂತರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಅಯ್ಯಪ್ಪ ಮಾಲಧಾರಿಗಳ ಘಟನೆ ಬಗ್ಗೆ ವಿಷಾಧ ವ್ಯಕ್ತಪಡಿಸುತ್ತೇನೆ ಎಂದ ಅವರು ಘಟನೆಯಲ್ಲಿ 9 ಜನರಲ್ಲಿ ಬಹುತೇಕರಿಗೆ 80 ರಿಂದ 90 ಶೇಕಡಾ ಸುಟ್ಡ ಗಾಯವಾಗಿವೆ.
ವೈದ್ಯರು ಎಲ್ಲ ಪ್ರಯತ್ನ ಮಾಡತೀದುವೈದ್ಯರಿಗೆ ನಿರ್ಲಕ್ಷ್ಯ ಮಾಡದಂತೆ ಸೂಚನೆ ಕೊಟ್ಟಿದ್ದೇವೆ. 20 ರಷ್ಟು ಸುಟ್ಟಗಾಯವಾಗಿರೋ ವಿನಾಯಕ್ ಮೇಲೆ ನಿಗಾ ಇಡಲು ಸೂಚನೆ ನೀಡಲಾಗಿದೆ.ಉಳಿದವನ್ಮು ಕ್ರಿಟಿಕಲ್ ಅಂತಾ ಹೇಳತೀದಾರೆ. ಕಾಯ್ದು ನೋಡಬೇಕಾಗಿದೆ ಗಾಯಾಳುಗಳನ್ನ ಬರ್ನಿಂಗ್ ವಾರ್ಡ್ ಗೆ ಶಿಫ್ಟ್ ಮಾಡಲು ಸೂಚನೆ…
ಅವರನ್ನು ಉಳಿಸೋ ಪ್ರಯತ್ನ ಮಾಡಬೇಕಿದ್ದುಆಮೇಲೆ ಪರಿಹಾರದ ಯೋಚನೆ ಮಾಡೋಣ.
ಇದೊಂದು ವಿಶೇಷ ಕೇಸ್ ಎಂದುಪರಿಗಣಿಸಿ,ಮುಖ್ಯಮಂತ್ರಿಗಳ ಪರಿಹಾರದ ನಿಧಿಯಿಂದ ಪರಿಹಾರ ಘೋಷಣೆ ಮಾಡಲಾಗುವುದು ಎಂದರು. ಇನ್ನುಇವತ್ತೆ ಡಿಸಿ ಅವರು ವರದಿ ಸಲ್ಲಿಸುತ್ತಾರೆ ನಂತರ ಪರಿಹಾರ ನೀಡಲು ಎಲ್ಲ ಪ್ರಯತ್ನ ಮಾಡತೀವಿ ಆದರೆ ಕಿಮ್ಸ್ ನಲ್ಲಿ ನಿರ್ಲಕ್ಷ್ಯ ಆಗಿರೋ ಮಾಹಿತಿ ಇದೆ.. ಅದನ್ನು ಆಂತರಿಕ ವಿಚಾರಣೆ ಮಾಡುತ್ತೇವೆ ಈಗಾಗಲೇ ಆಗಿರೋ ತಪ್ಪುಗಳ ಬಗ್ಹೆ ವಿಚಾರಣೆ ಮಾಡ್ತೀವಿ. ಇದೀಗ ನಿರ್ಲಕ್ಷ್ಯದ ಫೋಸ್ಟ್ ಮಾರ್ಟಂ ಕ್ಕಿಂತ ಅವರ ಆರೋಗ್ಯ ಮುಖ್ಯ ಎಂದರು