ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಯುವ ರಾಜಕಾರಣಿ ರಾಘವ್ ಚಡ್ಡಾ ಇತ್ತೀಚಿಗಷ್ಟೇ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೀಗ ರಾಜಸ್ಥಾನದಲ್ಲಿ ಪರಿಣಿತಿ- ರಾಘವ್ ಮದುವೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಮೇ 13ರಂದು ದೆಹಲಿಯಲ್ಲಿ ಆಪ್ತರ ಸಮ್ಮುಖದಲ್ಲಿ ಪರಿಣಿತಿ ಹಾಗೂ ರಾಘವ್ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಇದೀಗ ಈ ಜೋಡಿಯ ಮದುವೆ ಯಾವಾಗ? ಎಲ್ಲಿ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಉದಯ್ಪುರ, ಜೈಪುರ ಸೇರಿದಂತೆ ಹಲವು ಕಡೆ ಪರಿಣಿತಿ ಜೋಡಿ ಮದುವೆ ಸ್ಥಳ ನೋಡಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ರಾಜಸ್ಥಾನದಲ್ಲಿ ಮದುವೆ ಸ್ಥಳ ನಿಗದಿಯಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಸೆಪ್ಟೆಂಬರ್ನಿಂದ ನವೆಂಬರ್ ನಡುವೆ ಅದ್ದೂರಿ ಮದುವೆಯಾಗಲು ಈ ಜೋಡಿ ನಿರ್ಧಾರ ಮಾಡಿದ್ದಾರೆ.