ಗಟ್ಟಿಮೇಳದ ಅದಿತಿ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡ ಪಾರು ಧಾರವಾಹಿಯ ಪ್ರೀತು

ಫೋಟೋ ಗ್ಯಾಲರಿ

ಪಾರು ಧಾರವಾಹಿ ಖ್ಯಾತಿಯ ಪ್ರಿತು ಅಲಿಯಾಸ್ ಸಿದ್ದು ಮೂಲಿಮನೆ ಹಾಗೂ ಗಟ್ಟಿಮೇಳ ಖ್ಯಾತಿಯ ಅದಿತಿ ಅಲಿಯಾಸ್ ಪ್ರಿಯಾ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಕಳೆದ ಕೆಲ ಸಮಯದಿಂದ ಪ್ರೀತಿಸುತ್ತಿದ್ದ ಜೋಡಿ ಹಕ್ಕಿಗಳು ಇದೀಗ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಪ್ರಿಯಾ ಮತ್ತು ಸಿದ್ದು ಮೂಲಿಮನೆ ತಮ್ಮ ನಿಶ್ಚಿತಾರ್ಥಕ್ಕೆ ಸಂಬಂಧಿಕರು, ಸ್ನೇಹಿತರು ಮತ್ತು ಸಹ ನಟರನ್ನು ಸಾಕ್ಷಿಯಾಗಿದ್ದಾರೆ.

ಅದಿತಿ ಮತ್ತು ಪ್ರೀತು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಇಬ್ಬರ ಜೀವನ ಚೆನ್ನಾಗಿರಲಿ ಎಂದು ಎಲ್ಲರು ವಿಶ್ ಮಾಡಿದ್ದಾರೆ.

ನಿಶ್ಚಿತಾರ್ಥಕ್ಕೆ ಮೊದಲು ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿ ಪಾತ್ರ ನಿರ್ವಹಿಸುತ್ತಿದ್ದವರು ಬಂದಿದ್ದಾರೆ. ಪ್ರಿಯಾಗೆ ಪ್ರೀತಿಯಿಂದ ಮುತ್ತಿಟ್ಟು ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.

ಗಟ್ಟಿಮೇಳ ಧಾರಾವಾಹಿಯಲ್ಲಿ ಪ್ರಿಯಾ ಅವರು ನಟಿಯ ತಂಗಿ ಅದಿತಿ ಪಾತ್ರ ನಿರ್ವಹಿಸುತ್ತಿದ್ದಾರೆ. ಮನೆಯ ಕಷ್ಟಗಳಿಗೆ ಸಹಾಯ ಮಾಡ್ತಾ ಇದ್ದಾಳೆ. ಸೀರಿಯಲ್ ನಲ್ಲಿ ಧ್ರುವನನ್ನು ಪ್ರೀತಿ ಮಾಡ್ತಾ ಇದ್ದಾಳೆ.

ಪಾರು ಧಾರಾವಾಹಿಯಲ್ಲಿ ಸಿದ್ದು ನಟನ ತಮ್ಮ ಪ್ರೀತು ಪಾತ್ರವನ್ನು ಮಾಡ್ತಾ ಇದ್ದಾನೆ. ಧಾರಾವಾಹಿಯಲ್ಲಿ ಜನನಿಯನ್ನು ಪ್ರೀತಿ ಮದುವೆ ಆಗಿದ್ದಾರೆ. ಈಗ ನಿಜ ಜೀವನದಲ್ಲಿ ಹೊಸ ಪಯಣ ಶುರು ಮಾಡಲಿದ್ದಾರೆ.