ಪಾಟ್ನಾ: ಬಿಹಾರದ 10ನೇ ತರಗತಿಯ ಉತ್ತರ ಪತ್ರಿಕೆಯಲ್ಲಿವಿದ್ಯಾರ್ಥಿನಿಯೊಬ್ಬಳು ತನ್ನನ್ನು ಪಾಸ್ ಮಾಡಿ ಇಲ್ಲದಿದ್ದರೆ, ನನ್ನ ತಂದೆ ಮದುವೆ ಮಾಡ್ತಾರೆ ಎಂದು ಬರೆದಿದ್ದಾಳೆ. ಇದೀಗ ವಿದ್ಯಾರ್ಥಿನಿಯ ಉತ್ತರ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿದ್ಯಾರ್ಥಿನಿ ಉತ್ತರ ಪತ್ರಿಕೆಯಲ್ಲಿ, ನಾನು ಬಡ ಕುಟುಂಬದಿಂದ ಬಂದಿದ್ದು, ತನ್ನನ್ನು ಪಾಸ್ ಮಾಡುವಂತೆ ಮನವಿ ಮಾಡಿದ್ದಾಳೆ. ಅಲ್ಲದೇ ಪಾಸ್ ಮಾಡದಿದ್ದರೆ ತನ್ನನ್ನು ಮದುವೆ ಮಾಡುತ್ತಾರೆ. ಈಗ ಮದುವೆಯಾಗಲು ಇಷ್ಟವಿಲ್ಲ ಎಂದು ಆಕೆ ಬರೆದುಕೊಂಡಿದ್ದಾಳೆ
ಇನ್ನೂ ಕೆಲವರು ಉತ್ತರ ಪತ್ರಿಕೆಯಲ್ಲಿ ಸಿನಿಮಾ ಹಾಡುಗಳು ಹಾಗೂ ದೇವರ ನಾಮಗಳನ್ನು ಬರೆದಿದ್ದಾರೆ. ವಿದ್ಯಾರ್ಥಿಯೊಬ್ಬ ಸಲ್ಮಾನ್ ಖಾನ್ ನಟನೆಯ ಸಾಜನ್ ಚಿತ್ರದ ಹಾಡನ್ನು ಉತ್ತರ ಪತ್ರಕಿಯಲ್ಲಿ ಬರೆದಿದ್ದಾನೆ. ಇದೀಗ ಈ ಎಲ್ಲಾ ಉತ್ತರ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.