ಬೆಂಗಳೂರು:- ಬಿಎಂಟಿಸಿ ಪ್ರಯಾಣಿಕರೇ ಇದು ನೀವು ನೋಡಲೇಬೇಕಾದ ಸ್ಟೋರಿ. ಇನ್ನೂ ಪಾಸ್ಗಾಗಿ ಕ್ಯೂ ನಿಲ್ಲಬೇಕಿಲ್ಲ.. ಟಿಕೆಟ್ಗಾಗಿ ಕಾಯಬೇಕಿಲ್ಲ. ಯಾಕಂದ್ರೆ ಡಿಜಿಟಲ್ ಮಾದರಿಯ ಬಸ್ಪಾಸ್ ವ್ಯವಸ್ಥೆ ಜಾರಿಗೆ ತರಲಾಗಿದೆ.
ಸ್ಮಾರ್ಟ್ಫೋನ್ ಮೂಲಕವೇ ಬಸ್ ಪ್ರಯಾಣ ಮಾಡಬಹುದು. ಬಿಎಂಟಿಸಿ ಬಸ್ ಪ್ರಯಾಣಿಕರು ಈವರೆಗೆ ವಾರದ ಮತ್ತು ಮಾಸಿಕ ಬಸ್ಪಾಸ್ ಬಳಸುತ್ತಿದ್ದರು. ಪೂರ್ವ ಮುದ್ರಿತ ಪಾಸ್ ಇದಾಗಿತ್ತು. ಆದರೆ ಇನ್ಮುಂದೆ ಡಿಜಿಟಲ್ ಮಾದರಿಯ ಟುಮೋಕ್ ಹೆಸರಿನ ಆಯಪ್ನಲ್ಲಿ ಬಸ್ ಪಾಸ್ ಸಿಗಲಿದೆ. ಅದರ ಮೂಲಕ ಬಸ್ ಪ್ರಯಾಣ ಮಾಡಬಹುದಾಗಿದೆ.
ಬಿಎಂಟಿಸಿಯಲ್ಲಿ ದಿನನಿತ್ಯ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಅವರೆಲ್ಲರ ಪ್ರಯಾಣವನ್ನು ಸುಗಮಗೊಳಿಸಲು. ಸುಲಭವಾಗಿ ಬಸ್ ಪಾಸ್ ಸಿಗುವಂತೆ ಮಾಡಲು, ನಗದು ಮತ್ತು ಕಾಗದ ರಹಿತವಹಿವಾಟಿಗಾಗಿ ಡಿಜಿಟಲ್ ಪಾಸ್ ವ್ಯವಸ್ಥೆ ಅಭಿವೃದ್ಧಿ ಪಡಿಸಲಾಗಿದೆ.
ಬಿಎಂಟಿಸಿಯಲ್ಲಿ ಪ್ರಯಾಣಿಕರು ಪ್ರಯಾಣಿಸಲು ಟುಮೋಕ್ ಆಯಪ್ ಡೌನ್ಲೋಡ್ ಮಾಡಬೇಕಿದೆ. ಬಳಿಕ ನೋಂದಣಿ ಮಾಡಬೇಕಿದೆ. ಬಸ್ ಪಾಸ್ ಮಾದರಿಯನ್ನು ಆಯ್ಕೆ ಮಾಡಿ ವಿವರವನ್ನು ಭರ್ತಿ ಮಾಡಬೇಕು. ನಂತಗರ ಭಾವಚಿತ್ರವನ್ನು ಕ್ಲಿಕ್ಕಿಸಬೇಕು. ಇದಾದ ಬಳಿಕ ಪಾಸ್ ಮೊತ್ತವನ್ನು ಪಾವತಿಸಿದರೆ ಡಿಜಿಟಲ್ ಪಾಸ್ ಬಳಕೆಗೆ ಸಿಗಲಿದೆ.
ಇನ್ನು ಬಿಎಂಟಿಸಿಯಲ್ಲಿ ಪ್ರಯಾಣಿಸುವವರು ಡಿಜಿಟಲ್ ಪಾಸ್ ಹಾಗೂ ಗುರುತಿನ ಚೀಟಿಯನ್ನು ನಿರ್ವಾಹಕರಿಗೆ ತೋರಿಸಿ ಪ್ರಯಾಣಿಸಬಹುದಾಗಿದೆ. ಒಟ್ಟಿನಲ್ಲಿ ಪ್ರಸ್ತುತತೆಗೆ ಡಿಜಿಟಲ್ ಪಾಸ್ ಹೇಳಿ ಮಾಡಿಸಿದಂತಿದೆ. ಇದರಿಂದ ಪಾಸ್ಗಾಗಿ ಕಾಯುವ ಸಮಯ ಉಳಿಯಲಿದೆ.