ಬೆಂಗಳೂರು:- ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಇದರಿಂದ ಜನರು ತಂಪನೆಯ ವಾತಾವರಣ ಬಯಸುತ್ತಿದ್ದಾರೆ. ರಣ ಬಿಸಿಲಿನಲ್ಲಿ ಟ್ರಾಫಿಕ್ನಲ್ಲಿ ಬೈಕ್ ಮತ್ತು ಕಾರಿನಲ್ಲಿ ಸಂಚಾರ ಜನರನ್ನು ಹೈರಾಣಾಗಿಸಿದೆ. ಹೀಗಾಗಿ ಜನರು ಕಾರು, ಬೈಕು ಬಿಟ್ಟು ನಮ್ಮ ಮೆಟ್ರೋ ಮತ್ತು ಬಿಎಂಟಿಸಿಯಲ್ಲಿ ಸಂಚಿರಿಸುತ್ತಿದ್ದಾರೆ.
ಬಿಸಿಲ ಹೊಡೆತಕ್ಕೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏಕಾಏಕಿ ಏರಿಕೆಯಾಗಿದೆ. ಒಂದೇ ದಿನ ನಮ್ಮ ಮೆಟ್ರೋದಲ್ಲಿ ದಾಖಲೆಯ 7.9 ಲಕ್ಷ ಜನ ಪ್ರಯಾಣ ಮಾಡಿದ್ದಾರೆ. ಮೆಟ್ರೋದಲ್ಲಿ ಎಸಿ ಇರುತ್ತೆ ಜೊತೆಗೆ ಟ್ರಾಫಿಕ್ ಕಿರಿಕಿರಿಯಿಲ್ಲದೆ ಹೋಗಬಹುದು ಅಂತ ಪ್ರಯಾಣಿಕರು ಮೆಟ್ರೋ ಮೊರೆ ಹೋಗುತ್ತಿದ್ದಾರೆ
ಇನ್ನು ಈ ಬಿಸಿಲ ಹೊಡೆತ ಮುಂದುವರಿದರೆ, ಕೆಲ ದಿನಗಳಲ್ಲಿಯೇ ಪ್ರಯಾಣಿಕರ ಸಂಖ್ಯೆ 8 ಲಕ್ಷ ದಾಟುವ ನಿರೀಕ್ಷೆಯೂ ಇದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಬಿಎಂಟಿಸಿಯಲ್ಲೂ ಏಕಾಏಕಿ ಒಂದೇ ದಿನಕ್ಕೆ 10 ಲಕ್ಷ ಜನ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಬಿಎಂಟಿಎಸಿ ಎಸಿ ಬಸ್ಗಳಿಗಂತು ಡಿಮ್ಯಾಂಡ್ ಹೆಚ್ಚಾಗಿದೆ. ಶಾಲೆಗಳಿಗೆ ಈಗಾಗಲೇ ರಜೆ ಘೋಷಣೆ ಆಗಿದೆ ಈ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಯಿಂದ ಬಹುತೇಕರು ಬೆಂಗಳೂರಿಗೆ ಪ್ರವಾಸ ಬರುತ್ತಿದ್ದಾರೆ. ಇದರಿಂದ ಬಿಎಂಟಿಸಿ, ನಮ್ಮ ಮೆಟ್ರೋ ಏರಿ ಬೆಂಗಳೂರಿನಲ್ಲಿ ಸುತ್ತಾಟ ನಡೆಸುತ್ತಿದ್ದಾರೆ.
ಈ ಹಿಂದೆ ನಮ್ಮ ಮೆಟ್ರೋದಲ್ಲಿ 5 ರಿಂದ 6 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರೆ, ಬಿಎಂಟಿಸಿಯಲ್ಲಿ 30 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಬೇಸಿಗೆಗೆ ಬರೋಬ್ಬರಿ 40 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಬೇಸಿಗೆಯ ಸುಡು ಬಿಸಿಲಿಗೆ ಬೈಕ್, ಆಟೋ ಅಂತ ಪ್ರಯಾಣ ಮಾಡುತ್ತಿದ್ದವರೆಲ್ಲ ಮೆಟ್ರೋ ಮತ್ತು ಬಿಎಂಟಿಸಿ ಬಸ್ಗಳ ಮೊರೆ ಹೋಗುತ್ತಿದ್ದಾರೆ