ಪ್ಯಾಶನ್ ಹಣ್ಣು ಉಷ್ಣವಲಯದಲ್ಲಿ ಬೆಳೆಯುವ ಹೂಬಿಡುವ ಬಳ್ಳಿಯಾಗಿದ್ದು ಇದನ್ನು ಪ್ಯಾಸಿಫ್ಲೋರಾ ಎಂದು ಕರೆಯಲಾಗುತ್ತದೆ, ಇದು ದಕ್ಷಿಣ ಅಮೇರಿಕಾ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಭಾರತದಂತಹ ಉಷ್ಣ ವಾತಾವರಣವಿರುವ ದೇಶಗಳಲ್ಲಿ ಬೆಳೆಯುತ್ತಾರೆ. ಪ್ಯಾಶನ್ ಹಣ್ಣು ಸಿಹಿಯಾಗಿದ್ದು, ಗಟ್ಟಿಯಾದ ತೊಗಟೆಯ ಒಳಗೆ ಮೃದುವಾದ ತಿರುಳು ಮತ್ತು ಅನೇಕ ಬೀಜಗಳನ್ನು ಹೊಂದಿರುತ್ತದೆ.
ಇದರ ಬೀಜಗಳು ಮತ್ತು ತಿರುಳನ್ನು ತಿನ್ನಬಹುದು, ಅವುಗಳನ್ನು ಜ್ಯೂಸ್ ಮಾಡಬಹುದು ಅಥವಾ ಬೇರೆ ಹಣ್ಣುಗಳ ರಸಗಳೊಂದಿಗೆ ಸೇರಿಸಬಹುದು.
ಪ್ಯಾಶನ್ ಹಣ್ಣು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳ ಮೂಲವಾಗಿದ್ದು ಸಾಕಷ್ಟು ಪೌಷ್ಠಿಕಾಂಶಗಳನ್ನು ಹೊಂದಿದ್ದು ಅನೇಕ ಆರೋಗ್ಯ ಪ್ರಯೋಜನಗಳಿವೆ. ಪ್ಯಾಶನ್ ಹಣ್ಣು ಆರೋಗ್ಯಕರ ಪೌಷ್ಟಿಕಾಂಶದ ಆಗರವನ್ನು ಹೊಂದಿರುವ ಹಣ್ಣು. ಇದು ಹೆಚ್ಚಿನ ಮಟ್ಟದ ವಿಟಮಿನ್ ಎಯನ್ನು ಹೊಂದಿರುತ್ತದೆ, ಇದು ಚರ್ಮ, ದೃಷ್ಟಿ ಮತ್ತು ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಮುಖ್ಯವಾಗಿದೆ ಮತ್ತು ಇದರಲ್ಲಿರುವ ವಿಟಮಿನ್ ಸಿ ಪ್ರಮುಖ ಉತ್ಕರ್ಷಣ ನಿರೋಧಕವಾಗಿದೆ.
ಪ್ರಯೋಜನಗಳೇನು?
ಪ್ಯಾಶನ್ ಫ್ರೂಟ್ ಮಧುಮೇಹ ರೋಗಿಗಳಿಗೆ ಬಹಳ ಉಪಯುಕ್ತವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಏಕೆಂದರೆ ಇದರಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇದ್ದು ಈ ಕಾರಣದಿಂದಾಗಿ ಸಕ್ಕರೆ ಮಟ್ಟ ಹೆಚ್ಚಾಗುವುದಿಲ್ಲ. ಇದಲ್ಲದೆ, ಇದು ಫೈಬರ್ ನಿಂದ ಸಮೃದ್ಧವಾಗಿದೆ. ಇದು ದೇಹದಲ್ಲಿನ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ.
ಈ ಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ಎಲೆಕ್ಟ್ರೋಲೈಟ್ ಗಳಿವೆ. ಇವು ಹೃದಯವನ್ನು ಆರೋಗ್ಯವಾಗಿರಿಸುತ್ತವೆ. ಇದಲ್ಲದೆ, ಇದರಲ್ಲಿರುವ ಫೈಬರ್ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪಿಸೆಟನಾಲ್ ಮತ್ತು ಸಿರ್ಪುಸಿನ್ ಬಿ ಸಂಯುಕ್ತವು ಹೃದ್ರೋಗಗಳನ್ನು ನಿವಾರಿಸುತ್ತದೆ. ರಕ್ತ ಪರಿಚಲನೆಯನ್ನು ನಿಯಂತ್ರಿಸುತ್ತದೆ.
ಪ್ಯಾಶನ್ ಫ್ರೂಟ್ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವ ಮೂಲಕ, ದೇಹದ ಚಯಾಪಚಯ ಕ್ರಿಯೆ ವೇಗವಾಗಿ ಆಗುತ್ತದೆ, ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ತೂಕವನ್ನು ನಿಯಂತ್ರಣದಲ್ಲಿಡುತ್ತದೆ.
ಈ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅಲ್ಲದೆ ಇದರಲ್ಲಿ ವಿಟಮಿನ್ ಎ, ಸಿ ಮತ್ತು ಬೀಟಾ ಕ್ಯಾರೋಟಿನ್ ನಂತಹ ಪೋಷಕಾಂಶಗಳಿವೆ, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ದೇಹವನ್ನು ಅನೇಕ ಕಾಲೋಚಿತ ಕಾಯಿಲೆಗಳಿಂದ ರಕ್ಷಿಸುತ್ತದೆ.