ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಎ1 ಆರೋಪಿಯಾಗಿ ಜೈಲು ಸೇರಿದ್ದಾರೆ. ತಮಗೆ ಕಿರುಕುಳ ನೀಡಿದ ರೇಣುಕಾ ಸ್ವಾಮಿಯನ್ನು ನಟ ದರ್ಶನ್ ಜೊತೆ ಸೇರಿ ಪವಿತ್ರಾ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಪವಿತ್ರಾ ಗೌಡ ಮೇಕಪ್ ಮಾಡಿ ವಿಚಾರಣೆ ವೇಳೆ ಕಾಣಿಸಿಕೊಂಡಿದ್ದು ಸಾಕಷ್ಟು ಆಕ್ರೋಶಕ್ಕೆ ಕಾರಣಕವಾಗಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಕೇಳಿ ಬಂದಿತ್ತು. ಈ ಮಧ್ಯೆ ಪವಿತ್ರಾಗೆ ಮೇಕಪ್ ಮಾಡಲು ಅವಕಾಶ ನೀಡಿದ ಪಿಎಸ್ಐಗೆ ಸಂಕಷ್ಟ ಎದುರಾಗಿದೆ.
ಜೂನ್ 15ರಂದು ಪವಿತ್ರಾ ಗೌಡ ಮನೆ ಮಹಜರು ಮಾಡಲಾಗಿತ್ತು. ಈ ವೇಳೆ ಪವಿತ್ರಾ ಗೌಡ ಕೂಡ ಇದ್ದರು. ಪವಿತ್ರಾಗೆ ಲಿಪ್ಸ್ ಟಿಕ್ ಹಚ್ಚಲು ಪಿಎಸ್ಐ ಅವಕಾಶ ಕೊಟ್ಟಿದ್ದರು. ಕರ್ತವ್ಯ ಲೋಪ ಹಿನ್ನಲೆಯಲ್ಲಿ ವಿಜಯನಗರದ ಮಹಿಳಾ ಪಿಎಸ್ಐಗೆ ನೋಟಿಸ್ ನೀಡಲಾಗಿದೆ. ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಅವರಿಂದ ನೋಟಿಸ್ ನೀಡಲಾಗಿದೆ.
ಪವಿತ್ರಾ ಅವರು ಜೈಲಿನಲ್ಲಿ ಸಾಕಷ್ಟು ಅಸಮಾಧಾನಗೊಂಡಿದ್ದಾರೆ. ಜೈಲಿನ ಊಟ ಅವರಿಗೆ ಇಷ್ಟ ಆಗಿರಲಿಲ್ಲ. ಈ ಕಾರಣಕ್ಕೆ ಸಾಕಷ್ಟು ಬೇಸರ ಮಾಡಿಕೊಂಡಿದ್ದರು. ಕುಟುಂಬದವರು ಯಾರೂ ನೋಡಲು ಬರುತ್ತಿಲ್ಲ ಎನ್ನುವ ಟೆನ್ಷನ್ ಅವರಿಗೆ ಇತ್ತು. ಅವರ ಮಗಳು ಇತ್ತೀಚೆಗೆ ಬಂದು ಪವಿತ್ರಾನ ನೋಡಿ ಹೋಗಿದ್ದು ಆ ಬಳಿಕ ಪವಿತ್ರಾ ಕೊಂಚ ಸಮಧಾನವಾಗಿದ್ದಾರೆ.