ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ , ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿದೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಎಂಬ ಕಾರಣಕ್ಕೆ ರೇಣುಕಸ್ವಾಮಿಯನ್ನು ಅಪಹರಿಸಿ, ಶೆಡ್ನಲ್ಲಿ ಕೂಡಿ ಹಾಕಿ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ದರ್ಶನ್ ಎಂಡ್ ಗ್ಯಾಂಗ್ ನ ಕೃತ್ಯವನ್ನು ಸಾಕಷ್ಟು ಮಂದಿ ಖಂಡಿಸಿದ್ದಾರೆ. ಇದೀಗ ಹಿರಿಯ ರಂಗಕರ್ಮಿ ಹಾಗೂ ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಘಟನೆಯನ್ನು ಖಂಡಿಸಿದ್ದಾರೆ.
ಗುರು ಅಡ್ಡಂಡ ಕಾರ್ಯಪ್ಪ ಮಾತನಾಡಿ, ನಾನೊಬ್ಬ ಕಲಾವಿದ. ದರ್ಶನ್ ಕೂಡಾ ಕನ್ನಡ ಸಿನಿಮಾರಂಗದ ಉತ್ಕೃಷ್ಟ ಕಲಾವಿದರಲ್ಲಿ ಮೇರು ನಟನಾಗಿ ಬೇಳೆದವನು. ಈ ಪ್ರಕರಣದಿಂದ ಅವನಿಗೆ ಈ ಸ್ಥಿತಿ ಬಂತಲ್ಲ ಎಂದು ತುಂಬಾ ದೊಡ್ಡ ನೋವಾಗಿದೆ. ನಾನು ಅವನ ಹಿತೈಶಿ ಆಗಿದ್ದೇನೆ. ದರ್ಶನ್ ಅವರ ಆರಂಭಿಕ ಜೀವನ, ಸೌಜನ್ಯ, ಮುಗ್ಧತೆ ಎಲ್ಲಾ ಯಾಕೆ ಮಾಯವಾದವು? ಕೀರ್ತಿಯೆ ಅವನಿಗೆ ಮುಳುವಾಯ್ತಾ? ಅದೇ ಅಹಂಕಾರವಾಯ್ತಾ? ಮದ್ಯಪಾನ ಅವನಿಗೆ ತೊಂದರೆ ಕೋಡ್ತಾ? ಹೆಣ್ಣಿನ ವ್ಯಾಮೋಹ ಮುಳುವಾಯ್ತಾ? ಎನ್ನುವುದು ಪ್ರಶ್ನೆಯಾಗಿದೆ. ಕನ್ನಡ ಇಂಡಸ್ಟ್ರಿಯಲ್ಲಿ ಹೇಗೆ ಇರಬೇಕು? ಇರಬಾರದು ಎಂದು ಹೇಳುವುದಕ್ಕೆ ದರ್ಶನ್ ಒಂದು ಪಾಠವಾಗಿದ್ದಾರೆ ಎಂದಿದ್ದಾರೆ.
ಪೋರ್ನಂಪೇಟೆ ಎನ್ನುವ ಊರು ದರ್ಶನ್ ಅವರ ಅಜ್ಜಿ ಮನೆ. ನಾನು ರಂಗ ಶಿಬಿರ ಮಗಿಸಿ ಬಂದಾಗ ನನ್ನ ಊರಲ್ಲಿ ರಂಗಶಿಬಿರ ಮಾಡುತ್ತಿದ್ದೇನು. ಆಗ ನನಗೆ ದರ್ಶನ್ ಪರಿಚಯವಾಗಿತ್ತು. ನಿನಾಸಂಗೆ ಹೋಗಲು ಹೇಳಿದ್ದೇನು. ನಂತ್ರ ಅಲ್ಲಿ ತರಬೇತಿ ಪಡೆದು ಬಂದನು. ನಂತ್ರ ಸಿನಿಮಾ ಇಂಡಸ್ಟ್ರಿಯಲ್ಲಿ ಕಷ್ಟಪಟ್ಟಿದ್ದಾನೆ ಎಂದಿದ್ದಾರೆ.
ಅವನು ಹಾದಿ ತಪ್ಪಿದ್ದಾನೆ ಎಂದರೆ ಒಂದು ಅವನಿಗೆ ಶಿಕ್ಷಣದ ಕೊರತೆ ಹಾಗೂ ಅವನಿಗೆ ಈಗ ಇರುವಂತಹ ಸ್ನೇಹಿತರಾಗಿದ್ದಾರೆ. ಇದು ಅವನ ಆಯ್ಕೆ ಆಗಿತ್ತು. ಪತ್ನಿಗೆ ಹಿಂಸೆ ಕೊಟ್ಟು ಸುದ್ದಿಯಾಗಿದ್ದ, ಆಗ ಮೀಡಿಯಾಗಳು ಬ್ಯಾನ್ ಮಾಡಿದ್ದವು. ಯಾವ ನಟ, ನಟಿಯನ್ನು ಹೀಗೆ ಮೀಡಿಯಾ ಬ್ಯಾನ್ ಮಾಡಿತ್ತು ಹೇಳಿ? ಒಳ್ಳೆಯ ಗುಣವನ್ನು ಉಪಯೋಗಿಸಿಕೊಳ್ಳದೆ ಹೋದ ದರ್ಶನ್ ಗೋವು, ಕೃಷಿ, ರೈತರ ಕುರಿತಾಗಿ ಕಾಳಜಿ ಹೊಂದಿದ್ದ. ಆದರೆ ಇದೆಲ್ಲ ಗಣವನ್ನು ಬಿಟ್ಟು ಹೆಂಡ, ಹೆಣ್ಣು, ಅಹಂಕಾರ ಹಿಂದೆ ಹೋದನು ಎಂದು ಹೇಳಿದ್ದಾರೆ.
ರೇಣುಕಸ್ವಾಮಿ ತಪ್ಪು ಮಾಡಿದ್ದಾನೆ. ಅದಕ್ಕೆ ಕಾನೂನು ಇದೆ. ಸಿನಿಮಾ ಸ್ಟೈಲ್ನಲ್ಲಿ ಎತ್ತಾಕಿಕೊಂಡು ಬನ್ನಿ ಎಂದು ಹೇಳಿ ಸಿಗ್ರೇಟ್ನಲ್ಲಿ ಸುಟ್ಟು ಚಿತ್ರ ಹಿಂಸೆ ಕೊಟ್ಟು ಪ್ರಾಣ ತೆಗೆಯುವುದು ಸಿನಿಮಾದಲ್ಲಿ. ಆದರೆ ಇದು ಬದುಕು. ಆದರೆ ಸಿನಿಮಾ, ಬದುಕು ಬೇರೆ ಅಲ್ಲ ಅಂತಾ ತಿಳಿದುಕೊಂಡು ಬಿಟ್ಟದ್ದ ಈ ಮೂರ್ಖ ಎಂದಿದ್ದಾರೆ.
ಅವನಿಗೆ ಅವನೆ ಶತ್ರು, ಪವಿತ್ರಾಗೌಡ ಶನಿಯಾಗಿ ಬಂದ್ರು. ಅವಳಿಗಾಗಿ ಇವನು ಇಷ್ಟೆಲ್ಲ ಮಾಡಿದ್ದಾನೆ. ಕೊಲೆಯಾದ ರೇಣುಕಸ್ವಾಮಿ ಅಶ್ಲೀಲ ವಿಡಿಯೋ ಕಳಿಸಿದ್ದು ಅವಳಿಗೆ ಆದ್ರೂ ಕೂಡಾ ಶಿಕ್ಷೆ ಕೊಡಲು ಕಾನೂನು ಇತ್ತು. ಈಗಲೂ ನನ್ನ ಶಿಷ್ಯ ಅಂತಾ ಹೇಳಿಕೊಳ್ಳುತ್ತೇನೆ. ಆದರೆ ತುಂಬಾ ಬೇಸರ ಆಗ್ತಿದೆ. ಕಷ್ಟದ ದಿನಗಳು ಬರುತ್ತವೆ. ಆದರೆ ದರ್ಶನ್ ಕೊಲೆ ಪ್ರಕರಣದಲ್ಲಿ ಇರುವುದು ಬೇಸರವಾಗಿದೆ ಎಂದಿದ್ದಾರೆ.
ಜನಕ್ಕೆ ಈಗ ಮರೆವು… ಜನ ಎಲ್ಲಾ ವಿಚಾರವನ್ನು ಮರೆಯುತ್ತಾರೆ. ಇವನ ಕೈನಲ್ಲಿದೆ ಅವನು ಹೇಗೆ ಜೀವನ ನಡೆಸುತ್ತಾನೆ ಎನ್ನುವುದು ಮುಖ್ಯವಾಗುತ್ತದೆ. ದರ್ಶನ್ ಹೊರಗೆ ಬಂದ್ರೆ ಸಂಸ್ಕಾರ ಪಡೆದು ಹೊಸ ಜೀವನ ಕಟ್ಟಿಕೊಂಡು ಎಲ್ಲವನ್ನು ಮರೆತು ನಡೆ ಎಂದು ಹೇಳುತ್ತೇನೆ ಎಂದು ತಮ್ಮ ಶಿಷ್ಯನ ಬಗ್ಗೆ ಮಾತನಾಡಿದರು.