ಕಳೆದು ಮೂರು ನಾಲ್ಕು ದಿನಗಳಿಂದ ಬರೀ ನಟ ದರ್ಶನ್ ಹಾಗೂ ಪವಿತ್ರಾ ಗೌಡರದ್ದೇ ಸುದ್ದಿ. ಇದುವರೆಗೂ ಆಗಾಗ ಸುದ್ದಿಯಾಗುತ್ತಿದ್ದು ದರ್ಶನ್ ಹಾಗೂ ಪವಿತ್ರಾ ಸಂಬಂಧಿ ಇದೀಗ ಕೊಲೆ ಪ್ರಕರಣದಲ್ಲಿ ಪೊಲೀಸ್ ಠಾಣೆಗೆ ಬಂದು ನಿಂತಿದೆ.
ನಟಿ ಪವಿತ್ರಾರನ್ನು ನೋಡ್ತಿದ್ದಂಗೆ ಯಾರಿಗಾದ್ರು ಈಕೆ ಸೌಂದರ್ಯವತಿ ಅಂತ ಅನಿಸೋದೆ ಇರೋದಿಲ್ಲ. ನಿಜವಾಗಿಯೂ ಪವಿತ್ರಾ ಅಷ್ಟು ಸೌಂದರ್ಯವಾಗಿದ್ದಾರೆ. ಆದ್ರೆ ಆ ಸೌಂದರ್ಯದ ಹಿಂದೆ ಯಾರಿಗೂ ಕಾಣದ ಮುಖವಿದೆ ಅನ್ನೋದು ರೇಣುಕಾಸ್ವಾಮಿ ಹತ್ಯೆಯಾದ ಬಳಿಕವೇ ಬಯಲಾಗಿದೆ.
ಹೌದು. ಇಂದು ಕೋಟ್ಯಾಂತರ ರೂಪಾಯಿಗಳ ಒಡತಿಯಾಗಿರೋ ಪವಿತ್ರಾ ಗೌಡ ಮೊದಲು ವಾಸವಿದದ್ದು ಸಣ್ಣದೊಂದು ಬಾಡಿಗೆ ಮನೆಯಲ್ಲಿ.
ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಪವಿತ್ರಾ ಕಟುಂಬ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅದೇ ಮನೆಯ ಮುಂದಿದ್ದ ಕಿರಾಣಿ ಅಂಗಡಿ ಮಾಲಿಕನ ಜೊತೆ ಪವಿತ್ರಾಗೆ ಪ್ರೀತಿಯಾಗಿ ಬಳಿಕ ಇಬ್ಬರು ಮದುವೆಯಾದರು.
ಪವಿತ್ರಾ ಗೌಡ ಹಾಗೂ ಸಂಜಯ್ ಸಿಂಗ್ ದಂಪತಿಗಳಿಗೆ ಖುಷಿ ಎಂಬ ಮಗಳು ಹುಟ್ಟಿದಳು. ಮೊದಲು ತೀರಾ ಸಣ್ಣಗಿದ್ದ ಪವಿತ್ರಾ ಗೌಡ ಮಗುವಾದ ಬಳಿಕ ದಪ್ಪಗಾದರು. ಹೀಗಾಗಿ ಏರೋಬಿಕ್ಸ್ ಕ್ಲಾಸ್ ಗೆ ಸೇರಿಕೊಂಡರು. ಅಲ್ಲೇ ಪವಿತ್ರಾ ದಿಕ್ಕು ಬದಲಾಗಿದ್ದು.
ಅದುವರೆಗೂ ಗಂಡ, ಹೆಂಡತಿ ಅನ್ಯೋನ್ಯವಾಗಿಯೇ ಇದ್ದರು. ಆದರೆ ಯಾವಾಗ ಪವಿತ್ರಾ ಸಣ್ಣಗಾಗಬೇಕು ಎಂದು ಏರೋಬಿಕ್ಸ್ ಕ್ಲಾಸ್ ಸೇರಿಕೊಂಡರೋ ಆಗ ಅಲ್ಲಿ ನಟಿಯೊಬ್ಬರ ಪರಿಚಯವಾಗಿದೆ. ಆಕೆಯಿಂದ ಪವಿತ್ರಾ ಚಿತ್ರರಂಗದ ಮೇಲೆ ಆಸಕ್ತಿ ಬೆಳಸಿಕೊಂಡರು.
ಬಳಿಕ ಸಾಕಷ್ಟು ಸಿನಿಮಾಗಳಿಗೆ ಆಡಿಷನ್ ನೀಡಿದರು. ಆದರೆ ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದರು. ಆದ್ರೆ ಆ ಸಿನಿಮಾಗಳು ಹೇಳಿಕೊಳ್ಳುವ ಮಟ್ಟಿಗೆ ಸದ್ದು ಮಾಡಲಿಲ್ಲ. ಯಾವಾಗ ಸಿನಿಮಾ ಕೈ ಹಿಡಿಯಲ್ಲ ಎಂದು ಗೊತ್ತಾಯ್ತೋ ಆಗ ಪವಿತ್ರಾ ರೆಡ್ ಕಾರ್ಪೆಟ್ ಹೆಸರಿನ ಶಾಪ್ ಆರಂಭಿಸಿದರು.
ಪವಿತ್ರಾರಾ ರೆಡ್ ಕಾರ್ಪೆಟ್ ಶಾಪ್ ನಲ್ಲಿ ಹೆಚ್ಚಾಗಿ ಸೆಲೆಬ್ರಿಟಿಗಳು ಬಟ್ಟೆ ಖರೀದಿ ಮಾಡುತ್ತಾರೆ. ಜನ ಸಾಮಾನ್ಯರು ಈತ ಕಡೆ ಸುಳಿಯೋದು ಇಲ್ಲ. ಅಷ್ಟು ದುಬಾರಿ ಅಲ್ಲಿನ ಬಟ್ಟೆಗಳು.
ಪವಿತ್ರಾ ಗೌಡಗೆ ನಟಿ ಆಗಬೇಕೆಂಬ ಕನಸಿತ್ತು. ಪವಿತ್ರಾ ನಟಿಸಿದ್ದ ಮೊದಲ ಸಿನಿಮಾದ ಅಗಮ್ಯ.ಆದರೆ ಮೊದಲ ಸಿನಿಮಾವೇ ಫ್ಲಾಪ್ ಆಗಿತ್ತು. ಆನಂತರ ತಮಿಳು ಚಿತ್ರಗಳ ಕಡೆ ಮುಖ ಮಾಡಿದ ನಟಿ ಪವಿತ್ರಾ ಅಲ್ಲೂ ಹೇಳಿಕೊಳ್ಳುವ ಅವಕಾಶ ಸಿಗದಿದ್ದಾಗ ಮತ್ತೆ ಸ್ಯಾಂಡಲ್ ವುಡ್ ಗೆ ವಾಪಸ್ ಆದರು.
ಜಗ್ಗುದಾದಾ ಸಿನಿಮಾ ಮಾಡುವ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಪರಿಚಯವಾಗಿದೆ. ದರ್ಶನ್ ಜೊತೆ ಅತ್ಯಾಪ್ತವಾಗಿರುವ ಫೋಟೋ ರಿಲೀಸ್ ಮಾಡಿದ್ದ ಪವಿತ್ರಾಗೌಡ 10 ವರ್ಷಗಳ ಬಾಂದವ್ಯ ಎಂದು ಹೇಳುವ ಮೂಲಕ ದರ್ಶನ್ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದ್ದರು.