ಇಂದು ಪ್ರೇಮಿಗಳ ಪಾಲಿಗೆ ಮದುರ ದಿನ. ಹಲವರು ತಮ್ಮ ಪ್ರೇಮಿಗೆ ಪ್ರೇಮ ನಿವೇದನೆ ಮಾಡಿದರೆ ಇನ್ನೂ ಕೆಲವರು ತಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ನೀಡಿ ಶುಭ ಹಾರೈಸುತ್ತಿದ್ದಾರೆ., ಅಂತೆಯೇ ನಟಿ ಪವಿತ್ರಾ ಗೌಡ ಕೂಡ ಈ ವಿಶೇಷ ದಿನದಂದು ತಮ್ಮ ಕನಸಿಗೆ ಮರು ಜೀವ ನೀಡಿದ್ದಾರೆ.
ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ತಮ್ಮ ಕನಸಿನ ಸ್ಟುಡಿಯೋ ಆದ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ನಟಿ ರೀಲಾಂಚ್ ಮಾಡಿದ್ದಾರೆ.
ಅರ್ ಅರ್ ನಗರದಲ್ಲಿರುವ ಪವಿತ್ರಗೌಡ ಒಡೆತನದ ರೆಡ್ ಕಾರ್ಪೆಟ್ ಸ್ಟೂಡಿಯೋ ಈಗ ರಿ ಲಾಂಚ್ ಆಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಗೌಡ ಜೈಲು ಸೇರಿದ್ದರು. ನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ನಂತರ ಸುಮಾರು ಏಳು ತಿಂಗಳ ಕಾಳ ರೆಡ್ ಕಾರ್ಪೆಟ್ ಬಂದ್ ಆಗಿತ್ತು. ಈಗ ಅವರು ಅದನ್ನು ರಿಲಾಂಚ್ ಮಾಡಿದ್ದಾರೆ.
ಜಾಮೀನು ಪಡೆದು ಹೊರ ಬಂದ ಮೇಲೆ ಸಖಲ ಸಿದ್ದತೆ ಯೊಂದಿಗೆ ರೆಡ್ ಕಾರ್ಪೆಟ್ ರೀಲಾಂಚ್ ಮಾಡಲಾಗಿದೆ. ಸರಳವಾಗಿ ಪೂಜೆ ಮಾಡುವ ಮೂಲಕ ಪವಿತ್ರಾ ಗೌಡ ಅವರು ರೆಡ್ ಕಾರ್ಪೆಟ್ ರಿಲಾಂಚ್ ಮಾಡಿದ್ದಾರೆ.
2022 ರಲ್ಲಿ ರೆಡ್ ಕಾರ್ಪೆಟ್ ಶುರುಮಾಡಿದ್ದ ಪವಿತ್ರಗೆ ಸಾಥ್ ನೀಡಿದ್ದು ನಟ ದರ್ಶನ್. ಇದೀಗ ಮತ್ತೆ ತಮ್ಮ ಬ್ಯುಸಿನೆಸ್ ಸಕ್ಸಸ್ಫುಲ್ ಆಗಿ ರನ್ ಮಾಡುವ ಭರವಸೆಯಲ್ಲಿದ್ದಾರೆ ನಟಿ ಪವಿತ್ರಾ ಗೌಡ.
