ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಹಾಗೂ ಇನ್ನು ಕೆಲ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಪವಿತ್ರಾ ಗೌಡಗೆ ವಿಚಾರಣಾಧೀನ ಕೈದಿ ನಂಬರ್ ಅನ್ನು ಜೈಲಾಧಿಕಾರಿಗಳು ನೀಡಿದ್ದಾರೆ. ಈ ವೇಳೆ ಪವಿತ್ರಾ ಗೌಡ ಭೇಟಿಗೆ ಅವರ ಪೋಷಕರು ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಕ್ಯಾಮೆರಾ ಕಂಡು ಪವಿತ್ರಾ ಗೌಡ ತಮ್ಮ ಗರಂ ಆಗಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿಗೆ ಪವಿತ್ರಾ ಗೌಡ ಭೇಟಿ ಮಾಡಲು ಆಕೆಯ ತಂದೆ, ತಾಯಿ, ತಮ್ಮ ಮತ್ತು ಚಿಕ್ಕಮ್ಮ ಬಂದಿದ್ದರು. ಈ ವೇಳೆ ಮಾಧ್ಯಮಗಳ ಕ್ಯಾಮೆರಾ ಕಂಡು ಪವಿತ್ರಾ ಗೌಡ ತಮ್ಮ ಗರಂ ಆದರು. ʻʻನಿಮ್ಗೆ ಮಾಡೋದಿಕ್ಕೆ ಕೆಲ್ಸ ಇಲ್ವಾʼʼ ಎಂದು ಪವಿತ್ರಾ ಗೌಡ ತಮ್ಮ ಧಿಮಾಕಿನಿಂದ ಪ್ರಶ್ನೆ ಮಾಡಿದ್ದಾರೆ.
ಮನೆಯಲ್ಲಿದ್ದಷ್ಟು ದಿನವೂ ಸಖತ್ ಹೈಫೈ ಲೈಫ್ ಲೀಡ್ ಮಾಡುತ್ತಿದ್ದ ನಟಿ ಪವಿತ್ರಾ ಗೌಡಗೆ ಜೈಲು ವಾಸ ಹಿಂಸೆಯಾಗಿದೆ. ಜೈಲಿನಲ್ಲಿ 5 ಗಂಟೆಗೆ ಎದ್ದ ಪವಿತ್ರಾ ಒಂದಷ್ಟು ಹೊತ್ತು ವಾಕ್ ಮಾಡಿ ಬಳಿಕ ಜೈಲಿನಲ್ಲಿ ನೀಡಿದ ಕಾಫಿ ಸೇವಿಸಿದ್ದಾರೆ. ಜೈಲಿನಲ್ಲಿ ಪವಿತ್ರಾ ಹೆಚ್ಚು ಯಾರ ಜತೆಗೂ ಮಾತನಾಡದೇ ಮೌನಕ್ಕೆ ಶರಣರಾಗಿದ್ದಾರೆ. ಜೈಲಿನ ಸಿಬ್ಬಂದಿ ಬಳಿಯು ಅಷ್ಟಕ್ಕಷ್ಟೆ ಮಾತಾಡುತ್ತಿದ್ದಾರೆ. ಕೊಟ್ಟ ಊಟವನ್ನು ಕಾಟಾಚಾರಕ್ಕೆ ಸೇವಿಸುತ್ತಿರುವುದಾಗಿ ತಿಳಿದು ಬಂದಿದೆ. ಅರ್ಧಂಬರ್ಧ ಊಟವನ್ನು ಸೇವಿಸಿ ತಟ್ಟೆಯಲ್ಲಿ ಊಟವನ್ನ ಪವಿತ್ರಾ ಹಾಗೆ ಬಿಡುತ್ತಿದ್ದಾರೆ ಎನ್ನಲಾಗುತ್ತಿದೆ.