ತೆಲುಗು ಚಿತ್ರರಂಗದ ಖ್ಯಾತ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಖ್ಯಾತಿ ಘಳಿಸಿರುವ ಪವನ್ ಕಲ್ಯಾಣ್ ಪುತ್ರ ಅಕಿರಾ ಇದೀಗ ಚಿತ್ರರಂಗಕ್ಕೆ ಅಧಿಕೃತವಾಗಿ ಎಂಟ್ರಿಕೊಟ್ಟಿದ್ದಾರೆ.
ಸಾಮಾನ್ಯವಾಗಿ ಹೀರೋಗಳ ಮಕ್ಕಳು ಹೀರೋಗಳಾಗಿಯೇ ಚಿತ್ರರಂಗಕ್ಕೆ ಎಂಟ್ರಿಕೊಡೋದೆ ಹೆಚ್ಚು. ಆದರೆ ಪವನ್ ಕಲ್ಯಾಣ್ ಪುತ್ರ ಮಾತ್ರ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿಕೊಡುತ್ತಿಲ್ಲ. ಬದಲಾಗಿ ಮ್ಯೂಸಿಕ್ ಡೈರೆಕ್ಟರ್ ಆಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಪವರ್ ಸ್ಟಾರ್ ಪವನ್ ಕಲ್ಯಾಣ್ – ಮಾಜಿ ಪತ್ನಿ ರೇಣು ದೇಸಾಯಿ ಪುತ್ರ ಅಕಿರಾ ನಂದರ್ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಅಕಿರಾ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಾರೆ ಎಂದು ಆಸೆ ಇಟ್ಟುಕೊಂಡಿದ್ದ ಪವನ್ ಕಲ್ಯಾಣ್ ಫ್ಯಾನ್ಸ್ ಗೆ ಇದು ನಿರಾಸೆಯಾಗಿದ್ದರು, ಇಂಡಸ್ಟ್ರಿಗೆ ಎಂಟ್ರಿಕೊಡ್ತಿರುವ ಸುದ್ದಿ ಖುಷಿ ನೀಡಿದೆ.
ಕಾರ್ತಿಕೇಯ ಯರ್ಲಾಗಡ್ಡಾ ನಿರ್ದೇಶನದ ರೈಟರ್ಸ್ ಬ್ಲಾಕ್ ಚಿತ್ರಕ್ಕೆ ಅಕಿರಾ ನಂದನ್ ಮೊದಲ ಬಾರಿಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡ್ತಿದ್ದು, ಅಕಿರಾ ಚಿತ್ರರಂಗಕ್ಕೆ ಎಂಟ್ರಿಕೊಡುವ ಸುದ್ದಿ ಕೇಳಿ ಪವನ್ ಕಲ್ಯಾಣ್ ಫ್ಯಾನ್ಸ್ ಖುಷಿಯಾಗಿದ್ದಾರೆ.