ಬೆಂಗಳೂರು:- ಸಂಕ್ರಾಂತಿ ವೇಳೆಗೆ ಪೀಣ್ಯ ಫ್ಲೈಓವರ್ ಎಲ್ಲ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ. ಪೀಣ್ಯ ಮೇಲ್ಸೇತುವೆಯ 120 ಪಿಲ್ಲರ್ ನಡುವೆ ಹೊಸದಾಗಿ 240 ಕೇಬಲ್ ಅಳವಡಿಕೆ ಕಾರ್ಯ ಶೇ.70ರಷ್ಟು ಪೂರ್ಣಗೊಂಡಿದ್ದು, ಸಂಕ್ರಾಂತಿ ವೇಳೆಗೆ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ಫ್ಲೈ ಓವರ್ ಮುಕ್ತವಾಗುವ ಸಾಧ್ಯತೆಯಿದೆ.
ಮೇಲ್ಸೇತುವೆಯಲ್ಲಿ 120 ಪಿಲ್ಲರ್ ಇದ್ದು ಎರಡು ಪಿಲ್ಲರ್ಗಳ ನಡುವೆ ತಲಾ 10ರಂತೆ ಒಟ್ಟು 1200 ಕೇಬಲ್ ಇವೆ. ಮುಂಜಾಗ್ರತೆಯಾಗಿ ಎರಡು ಪಿಲ್ಲರ್ ನಡುವೆ ಹೊಸದಾಗಿ ಇನ್ನೂ ಎರಡು ಕೇಬಲ್ ಅಳವಡಿಸಲು ಅವಕಾಶವಿದೆ. ಆದ್ದರಿಂದ ಮೊದಲಿಗೆ 240 ಕೇಬಲ್ಗಳನ್ನು ಹೊಸದಾಗಿ ಅಳವಡಿಸಿ ಬಳಿಕ ಎಲ್ಲ ಬಗೆಯ ವಾಹನಗಳಿಗೆ ಮೇಲ್ಸೇತುವೆಯನ್ನು ಮುಕ್ತಗೊಳಿಸಲಾಗುವುದು. ಈ ಕಾರ್ಯ ಜ.14ರ ಹೊತ್ತಿಗೆ ಪೂರ್ಣಗೊಳ್ಳಲಿದೆ.
ಮೂರು ತಂಡಗಳು ಹೊಸ ಕೇಬಲ್ ಅಳವಡಿಕೆ ಕಾರ್ಯದಲ್ಲಿ ತೊಡಗಿವೆ. ಸಂಕ್ರಾಂತಿ ಬಳಿಕ ಮೇಲ್ಸೇತುವೆ ಎಲ್ಲ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ. 240 ಹೊಸ ಕೇಬಲ್ ಅಳವಡಿಕೆ ಮುಗಿದ ಬಳಿಕ 1200 ಕೇಬಲ್ ಅನ್ನೂ ಹಂತಹಂತವಾಗಿ ಬದಲಾಯಿಸಿ ಹೊಸ ಕೇಬಲ್ ಅಳವಡಿಸಲಾಗುವುದು. ಈ ಕಾರ್ಯಕ್ಕೆ ಒಂದೂವರೆ ವರ್ಷ ಕಾಲಾವಕಾಶ ಬೇಕಾಗಬಹುದು’ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.