ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ. ನೆತ್ತಿ ಸುಡುತ್ತಿರುವ ಬಿಸಿಲಿನ ತಾಪಕ್ಕೆ ಜನರು ಹೈರಾಣಾಗಿದ್ದಾರೆ. ಇದರ ನಡುವೆ ಬೇಸಿಗೆಯ ಶಾಖದ ಹೊಡೆತದಿಂದ ಅನೇಕರು ಸಾವನ್ನಪ್ಪಿರುವ ಸುದ್ದಿ ಕೂಡ ಇದೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ಬಿಸಿಲ ತರಂಗ ದೇಹಕ್ಕೆ ತಾಗಿದ ತಕ್ಷಣ, ಪಾದದ ಅಡಿಭಾಗದಲ್ಲಿ ಸುಡುವ ಸಂವೇದನೆ, ಕಣ್ಣುಗಳಲ್ಲಿನ ಕಿರಿಕಿರಿ ಪ್ರಜ್ಞಾಹೀನತೆಯ ಸ್ಥಿತಿ ಅನುಭವವಾಗುತ್ತದೆ. ಇಂತಹ ಪರಿಸ್ಥಿತಿಯನ್ನು ತಪ್ಪಿಸಲು ಬೀಟ್ ದಿ ಹೀಟ್ ಬಗ್ಗೆ ತಿಳಿದಿರಬೇಕಾಗಿರುವುದು ಬಹಳ ಮುಖ್ಯ.
ಇದಕ್ಕಾಗಿ ಜಾಸ್ತಿ ಯೋಚಿಸುವ ಅವಶ್ಯಕತೆ ಕೂಡ ಇಲ್ಲ. ಏಕೆಂದರೆ ಈ ಹಿಂದಿನ ಕಾಲದಲ್ಲಿ ಬೇಸಿಗೆ ಸಂದರ್ಭದಲ್ಲಿ ಹಿರಿಯರು ಮಾಡಿಕೊಳ್ಳುತ್ತಿದ್ದ ಮನೆಮದ್ದುಗಳ ಬಗ್ಗೆ ಒಮ್ಮೆ ಕಣ್ಣಾಯಿಸಿದರೆ ಸಾಕು. ಅಂತಹ ಕೆಲ ಕ್ರಮಗಳು ಇಲ್ಲಿವೆ.
ಪ್ರಸ್ತುತ ಸನ್ನಿವೇಶದಲ್ಲಿ ಮಾಸ್ಕ್ ಧರಿಸುವುದರಿಂದ ಸಾಂಕ್ರಾಮಿಕ ರೋಗಗಳನ್ನು ತಪ್ಪಿಸಬಹುದು. ಅದೇ ಸಮಯದಲ್ಲಿ, ನೀವು ಸೂರ್ಯ ಶಾಖದಿಂದ ಪರಾಗಲು ಕೊಡೆಯನ್ನು ಇಟ್ಟುಕೊಳ್ಳಿ ಅಥವಾ ಟೋಪಿ/ಸ್ಕಾರ್ಫ್ ಬಳಸಿ.
ಗಸಗಸೆ ರಸ, ಕಲ್ಲಂಗಡಿ ಜ್ಯೂಸ್ ಸೇರಿದಂತೆ ದೇಹವನ್ನು ತಂಪಾಗಿಸುವ ಪಾನೀಯಗಳನ್ನು ಮತ್ತೆ ಮತ್ತೆ ಕುಡಿಯಿರಿ. ಇವು ದೇಹದ ಶಾಖವನ್ನು ನಿಯಂತ್ರಣದಲ್ಲಿಡುತ್ತವೆ.
ಹೊರಗೆ ಹೋಗುವಾಗ ಖಾಲಿ ಹೊಟ್ಟೆಯಲ್ಲಿ ಹೋಗಬೇಡಿ. ಏಕೆಂದರೆ ಬೇಸಿಯಲ್ಲಿ ದೇಹದ ಶಕ್ತಿಯು ಶೀಘ್ರದಲ್ಲೇ ಕುಂಠಿತವಾಗುತ್ತವೆ. ಇದರಿಂದಾಗಿ ದೇಹವು ಬೇಗನೆ ದಣಿಯುವುದಲ್ಲದೆ, ತಲೆ ತಿರುಗುವಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ನೀವು ಎಸಿ ಅಥವಾ ಕೂಲರ್ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರೆ, ಇದ್ದಕ್ಕಿದ್ದಂತೆ ಬಿಸಿಲಿರುವ ಸ್ಥಳಕ್ಕೆ ಹೋಗಬೇಡಿ. ಇದರಿಂದ ಕೂಡ ದೇಹಕ್ಕೆ ಶಾಖದ ಹೊಡೆತದ ಅಪಾಯ ಉಂಟಾಗಬಹುದು
ದೇಹದಲ್ಲಿ ನೀರಿನ ಕೊರತೆಯಾಗದಂತೆ ಬೇಸಿಗೆಯ ದಿನಗಳಲ್ಲಿ ಆಗಾಗ್ಗೆ ನೀರು ಕುಡಿಯಿರಿ.ಬೇಸಿಗೆಯಲ್ಲಿ ಹೊರ ಹೋಗಿ ಬಂದ ಕೂಡಲೇ ನೀರು ಕುಡಿಯಲು ಮರೆಯಬೇಡಿ. ಸ್ವಲ್ಪ ಸಮಯದವರೆಗೆ ದೇಹಕ್ಕೆ ವಿಶ್ರಾಂತಿ ನೀಡಿ, ನಂತರ ನೀರು ಕುಡಿಯಿರಿ. ಅತಿಯಾಗಿ ಬೆವರುತ್ತಿರುವಾಗ ಅಥವಾ ಸಿಕ್ಕಾಪಟ್ಟೆ ಸುಸ್ತಾಗಿದ್ದ ವೇಳೆ ಕುಡಿಯಬಾರದು. ಇದು ಅಪಾಯಕಾರಿ.
ಬೇಸಿಗೆ ಸಂದರ್ಭಗಳಲ್ಲಿ ಕಂಡು ಬರುವ ಲಿಚಿ, ಕಲ್ಲಂಗಡಿ ಸೇರಿದಂತೆ ಹಲವು ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ಇದಲ್ಲದೆ ಮೊಸರು, ಜೀರಿಗೆ ಮಜ್ಜಿಗೆ, ಲಸ್ಸಿ, ಜೀರಿಗೆ ನೀರು ಕುಡಿಯಿರಿ. ದಿನಕ್ಕೆ ಎರಡು ಮೂರು ಬಾರಿ ನಿಂಬೆ ಪಾನಕವನ್ನು ಕುಡಿಯುವು ಉತ್ತಮ. ಅದರಲ್ಲಿ ತಿಳಿ ಉಪ್ಪು ಮತ್ತು ಸಕ್ಕರೆಯನ್ನು ಬೆರೆಸಿದರೆ ಇನ್ನೂ ರುಚಿಕರವಾಗಿರುತ್ತದೆ.
ಆಹಾರ ಪದ್ಧತಿಯಲ್ಲಿ ಮೊಸರನ್ನು ಸೇರ್ಪಡಿಸಿ . ಇದು ನಿಮ್ಮ ದೇಹವನ್ನು ಒಳಗಿನಿಂದ ತಂಪಾಗಿರಿಸುತ್ತದೆ. ತರಕಾರಿಗಳ ಸೂಪ್ ತಯಾರಿಸುವುದು ಮತ್ತು ಕುಡಿಯುವುದರಿಂದ ಹೀಟ್ಸ್ಟ್ರೋಕ್ನಿಂದ ಪಾರಾಗಬಹುದು. ಈರುಳ್ಳಿ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಬಿಸಿಲಿನಿಂದ ಬಂದ ತಕ್ಷಣ ನೆಕ್ಕಿರಿ. ಇದು ಸನ್ಸ್ಟ್ರೋಕ್ನ ಅಪಾಯವನ್ನೂ ಕಡಿಮೆ ಮಾಡುತ್ತದೆ.