ನನಗೆ ಜನತೆ ರೆಸ್ಟ್ ಕೊಟ್ಟಿದ್ದಾರೆ, ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಡಿಕೆ ಸುರೇಶ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ.
ಜನ ರೆಸ್ಟ್ ಕೊಟ್ಟಿದ್ದಾರೆ, ರೆಸ್ಟ್ ತೆಗೆದುಕೊಳ್ತೇನೆ. ಚನ್ನಪಟ್ಟಣದ ಉಪಚುನಾವಣೆಯಲ್ಲಿ ತಮ್ಮ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಿಯಿಸಿದರು. ಚನ್ನಪಟ್ಟಣ ಸ್ಪರ್ಧೆ ವಿಚಾರ ನನ್ನ ಮುಂದೆ ಚರ್ಚೆಯಲ್ಲಿ ಇಲ್ಲ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್, ಸಿಎಂ ಹಾಗೂ ಡಿಸಿಎಂ ತೀರ್ಮಾನ ಮಾಡ್ತಾರೆ. ಸೂಕ್ತ ಅಭ್ಯರ್ಥಿಯನ್ನ ನಮ್ಮ ಪಕ್ಷ ಕಣಕ್ಕಿಳಿಸುತ್ತೆ. ನಾನೂ ಕೂಡಾ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡ್ತೇನೆ. ಶಾಸಕರು ರಾಜೀನಾಮೆ ಕೊಟ್ಟು ಒಂದು ವಾರ ಆಗಿದೆ. ಇನ್ನೂ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಆಗಿಲ್ಲ. ಡಿಸಿಎಂ ಡಿಕೆಶಿ ಅವರು ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನಹರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನೂ ತಮ್ಮನಾಗಿ ಡಿಕೆಶಿ ಕನಕಪುರ ಕ್ಷೇತ್ರ ತ್ಯಾಗ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಕೇವಲ ಊಹಾಪೋಹ. ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಜನ ರೆಸ್ಟ್ ಕೊಟ್ಟಿದ್ದಾರೆ, ರೆಸ್ಟ್ ತೆಗೆದುಕೊಳ್ತೇನೆ. ನಾನು ಸಹ ಒತ್ತಡದಲ್ಲಿದ್ದೆ, ಸದ್ಯ ಅದರಿಂದ ಹೊರಗೆ ಬಂದಿದ್ದೇನೆ. ಬೇರೆಯವರ ಹಾಗೆಯೇ 20 ದಿನಗಳ ಚುನಾವಣೆ ಮಾಡ್ತೇನೆ