ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ ಬಿಸಿಲಿನ ತಾಪಮಾನ ನೆತ್ತಿ ಸುಡುತ್ತಿರುವ ಬಿಸಿಲಿನ ಝಳಕ್ಕೆ ಬೆಂಗಳೂರಿನ ಮಂದಿ ಹೈರಾಣು ಬಿಸಿಲ ಬೇಗೆಯಿಂದ ಪಾರಾಗಲು ರಾಜ್ಯ ರಾಜಧಾನಿ ಜನರ ಪರದಾಟಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಫೆಬ್ರವರಿ ತಿಂಗಳಲ್ಲಿ ಬಿಸಿಲಿನ ತಾಪ ಹೆಚ್ಚಳ
ಕಳೆದ ವರ್ಷ ಇದೇ ವೇಳೆ ಗರಿಷ್ಠ ಉಷ್ಠಾಂಶ 30 ಡಿ. ಸೆ. ಹಾಗೂ ಕನಿಷ್ಠ ಉಷ್ಠಾಂಶ 19 ಡಿ.ಸೆ. ದಾಖಲಾಗಿತ್ತು ಶಿವರಾತ್ರಿ ಕಳೆಯುವವರೆಗೂ ರಾಜ್ಯದಲ್ಲಿ ಚಳಿಗಾಲ ಇರುತ್ತೆ. ಈ ವರ್ಷ ಈಗಾಗಲೇ ಬಿಸಿಲು ಹೆಚ್ಚಾಗಿದೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಆಗುತ್ತಿದ್ದ ಬಿಸಿಲು ಈಗಲೇ ಹೆಚ್ಚಾಗಿದೆ ಕಳೆದ 10 ದಿನಗಳಿಂದ ಸತತವಾಗಿ ಉಷ್ಣತೆ ಏರಿಕೆ..ಜನರ ಪರದಾಟ
ನೆತ್ತಿ ಸುಡ್ತಿರುವ ಬಿಸಿಲು?
ಫೆಬ್ರವರಿ 14 31.2 ಡಿಗ್ರಿ ಸೆಲ್ಸಿಯೆಸ್ ತಾಪಮಾನ
ಫೆಬ್ರವರಿ 15 31.4 ಡಿಗ್ರಿ ಸೆಲ್ಸಿಯೆಸ್ ತಾಪಮಾನ
ಫೆಬ್ರವರಿ 16 30 ಡಿಗ್ರಿ ಸೆಲ್ಸಿಯೆಸ್ ತಾಪಮಾನ
ಫೆಬ್ರವರಿ 17 32 ಡಿಗ್ರಿ ಸೆಲ್ಸಿಯೆಸ್ ತಾಪಮಾನ
ಫೆಬ್ರವರಿ 18 32.6 ಡಿಗ್ರಿ ಸೆಲ್ಸಿಯೆಸ್ ತಾಪಮಾನ
ಬಿಸಲು ಏರಿಕೆಗೆ ಕಾರಣ
1. ಮಳೆ ಮತ್ತು ಚಳಿಯ ಪ್ರಮಾಣ ಕಡಿಮೆ ಇದ್ದು, ತಾಪಮಾನ ಹೆಚ್ಚಿದೆ
2. ವಾಹನಗಳ ಸಂಖ್ಯೆಯಲ್ಲಿಏರಿಕೆ. ಸಮತೋಲನಕ್ಕೆ ಬೇಕಾದ ಮರಗಳ ಪ್ರಮಾಣದಲ್ಲಿಇಳಿಕೆ
3. ನಿರಂತರ ಅರಣ್ಯ ನಾಶದಿಂದ ಭೂಮಿಯಲ್ಲಿ ತೇವಾಂಶದ ಕೊರತೆ.4. ವಾತಾವರಣದಲ್ಲಿ ತೇವಾಂಶ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿರುವುದು
ಎಚ್ಚರ ಅಂತಾರೆ ವೈದ್ಯರು
ಹೆಚ್ಚನ ತಾಪಮಾನದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎಚ್ಚರ ಅಂತಿದ್ದಾರೆ ವೈದ್ಯರು
ಜನರು ಹೆಚ್ಚು ನೀರು ಕುಡಿಯುವುದು, ಬಿಸಿಲಿನಲ್ಲಿ ಹೆಚ್ಚು ಓಡಾಡದೆ ಇರುವಂತೆ ಸಲಹೆ
ಬಿಸಿಲ ಝಳ ಹೆಚ್ಚಿರುವುದರಿಂದ ದೇಹದಲ್ಲಿನ ನೀರಿನಂಶ ಸಾಕಷ್ಟು ಕಡಿಮೆಯಾಗುತ್ತದೆ
ದೇಹಕ್ಕೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ನೀರು ಕುಡಿಯುವಂತೆ ಸಲಹೆ
ಕುಡಿಯದಿದ್ದರೆ ಉರಿ ಮೂತ್ರದ ಸಮಸ್ಯೆ, ಜತೆಗೆ ಕಿಡ್ನಿ ಸ್ಟೋನ್ ಸಮಸ್ಯೆ ಉಲ್ಬಣಿಸೋ ಸಾಧ್ಯತೆ
ಈ ಸಮಯದಲ್ಲಿ ಅಲರ್ಜಿ ಕೂಡ ಹೆಚ್ಚಾಗಿ ಜನರನ್ನು ಕಾಡುತ್ತದೆ ಎಚ್ಚರ ಅಂತಾರೆ ತಜ್ಞರು
ಬಿಸಿಲ ಬೇಗೆಯಿಂದ ಪಾರಾಗಲು ಜನ ತಂಪು ಪಾನೀಯ, ಮಜ್ಜಿಗೆ, ಎಳನೀರು, ಹಣ್ಣು, ಜ್ಯೂಸ್ ಮೊರೆ
ಬಿಸಿಲಿನ ಹೊಡೆತ ತಪ್ಪಿಸಿಕೊಳ್ಳುವುದಕ್ಕಾಗಿ ಛತ್ರಿ ಆಶ್ರಯ ಪಡೆಯುತ್ತಿದ್ದಾರೆ ಜನ