ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಒಂದಡೆ ತತ್ತರಿಸಿ ಹೋಗುತ್ತಿದ್ದರೆ ಮತ್ತೊಂದಡೆ ಸರ್ಕಾರಿ ಶಾಲಾ, ಕಾಲೇಜ್ ಕಟ್ಟಡಗಳಿಗೂ ಹಾನಿ ಆಗಿದೆ. ಅದರಲ್ಲೂ ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿರುವ ಅತ್ತಿಗುಂಡಿ ಕುಗ್ರಾಮ ಕಳೆದ 15 ದಿನಗಳಿಂದ ಕರೆಂಟ್ ಇಲ್ಲದೆ ಕತ್ತಲಲ್ಲಿ ಬದುಕುವಂತಾಗಿದೆ.
ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಇರುವ ಈ ಕುಗ್ರಾಮದ ಸುತ್ತಮುತ್ತ ಕಳೆದ ಒಂದೂವರೆ ತಿಂಗಳಿನಿಂದಲೂ ಧಾರಾಕಾರ ಮಳೆ ಸುರಿಯುತ್ತಿದೆ. ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಎಂಬ ಖ್ಯಾತಿಗೆ ಪಾತ್ರವಾಗಿರುವ ಮುಳ್ಳಯ್ಯನಗಿರಿಯ ಮಳೆಗೆ ಮಲೆನಾಡು ಅಕ್ಷರಶಃ ಕಂಗಾಲಾಗಿದೆ. ಅತ್ತಿಗುಂಡಿ ಮಾರ್ಗದಲ್ಲಿ ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿ
ಭಾರೀ ಮಳೆ ಗಾಳಿಯಿಂದ ಮುರಿದುಬಿದ್ದ ವಿದ್ಯುತ್ ತಂತಿ ಹಾಗೂ ಕಂಬಗಳನ್ನ ದುರಸ್ತಿ ಮಾಡುವುದು ಅಸಾಧ್ಯವಾಗಿದೆ. ಜೊತೆಗೆ ಮೇಲಿಂದ ಮೇಲೆ ವಿದ್ಯುತ್ ತಂತಿಗಳು ಹಾಗೂ ಕಂಬಗಳು ಮುರಿದು ಬಿದ್ದ ಪರಿಣಾಮ ಮೆಸ್ಕಾಂ ಸಿಬ್ಬಂದಿಗೆ ಲೈನ್ ದುರಸ್ತಿ ಮಾಡುವುದು ಕೂಡ ಅಸಾಧ್ಯವಾಗಿದೆ. ಹಾಗಾಗಿ, ಕಳೆದ 15 ದಿನಗಳಿಂದಲೂ ಕೂಡ ಈ ಗ್ರಾಮ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಮೊಬೈಲ್ ಚಾರ್ಜ್ ಕೂಡ ಮಾಡಿಕೊಳ್ಳಲಾಗಿದೆ ಗ್ರಾಮಸ್ಥರು ಮೊಬೈಲ್ಗಳನ್ನ ಮೂಲೆಗೆ ಎಸೆದಿದ್ದಾರೆ.
ಗ್ರಾಮದ ಯುವಕರು ಹಾಗೂ ಪುರುಷರು ಬೈಕಿನಲ್ಲಿ ನಗರಕ್ಕೆ ಬಂದಂತಹ ವೇಳೆಯಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಈ ಮಧ್ಯೆ ನಗರದಿಂದ ಅತ್ತಿಗುಂಡಿ ಹಾಗೂ ದತ್ತಪೀಠಕ್ಕೆ ನಿತ್ಯ ಸರ್ಕಾರಿ ಹಾಗೂ ಖಾಸಗಿ ಬಸ್ ಕೂಡ ಸಂಚಾರ ಮಾಡುತ್ತಿದ್ದವು. ಆದರೆ, ಭಾರಿ ಗಾಳಿ ಮಳೆಯಿಂದ ಗುಡ್ಡಗಳು ಜರುಗಿತು. ರಸ್ತೆ ಕುಸಿದ ಪರಿಣಾಮ ಕಳೆದ 45 ದಿನಗಳಿಂದ ಈ ಭಾಗಕ್ಕೆ ಬಸ್ ಸಂಚಾರ ಕೂಡ ಸ್ಥಗಿತಗೊಂಡಿದೆ.