ಹುಬ್ಬಳ್ಳಿ: ಹಳೆ ವರ್ಷವನ್ನ ಭರ್ಜರಿಯಾಗಿ ಬೀಳ್ಕೊಟ್ಟು, ಹೊಸ ವರ್ಷವನ್ನ ಅದ್ಧೂರಿಯಾಗಿ ಸ್ವಾಗತಿಸಿದ ಹುಬ್ಬಳ್ಳಿ ಜನತೆ ರಾತ್ರಿ ಹೊಸ ಪ್ರಪಂಚದಲ್ಲೇ ತೇಲಾಡಿದರು. ಕುಣಿದು, ಕುಪ್ಪಳಿಸಿ ಹೊಸ ವರ್ಷವನ್ನ ವೆಲ್ಕಮ್ ಮಾಡಿದ ಜನ ಹಳೆ ವರ್ಷದ ಹಳೆ ನೆನಪುಗಳಿಗೆ ಗುಡ್ಬಾಯ್ ಹೇಳಿದರು.
ವಾಣಿಜ್ಯ ನಗರಿ ಹುಬ್ಬಳ್ಳಿಯ ಪ್ರತಿಷ್ಟಿತ ಹೊಟೆಲ್ ಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹೋಟೆಲ್ಗಳು ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದ್ದವು. ಡಿಜೆ ಸೇರಿದಂತೆ ಅನೇಕ ಮನರಂಜನೆ ಕಾರ್ಯಕ್ರಮ ಭಾಗಿಯಾದ ಯುವಕ ಯುವತಿಯರು ಕುಣಿದು ಕುಪ್ಪಳ್ಳಿಸಿದರು
ಕಲರ್ ಫುಲ್ ಲೈಟ್ಸ್. ಜೋಶ್ ಫುಲ್ ಸಾಂಗ್ಸ್ ಗಳಿಂದ ನ್ಯೂಇಯರ್ಗೆ ಫುಲ್ ಹ್ಯಾಪಿ ಹ್ಯಾಪಿಯಾಗಿದ್ದರು. ಹಳೇ ವರ್ಷವನ್ನ ಭರ್ಜರಿಯಾಗಿ ಬೀಳ್ಕೊಟ್ಟು, ಹೊಸ ವರ್ಷವನ್ನ ಅದ್ಧೂರಿಯಾಗಿ ಸ್ವಾಗತಿಸಿದ ಜನತೆ ಹೊಸ ಪ್ರಪಂಚದಲ್ಲೇ ತೇಲಾಡಿದರು. ನಗರದ ಪ್ರಮುಖ ಹೊಟೆಲ್ ಗಳಿಂದ ಹಿಡಿದು ನಗರದ ಹೊರವಲಯದಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿತ್ತು. ಕುಣಿದು, ಕುಪ್ಪಳಿಸಿ ಹೊಸ ವರ್ಷವನ್ನ ಸ್ವಾಗತ ಮಾಡಿದ ಜನ ಹಳೆ ವರ್ಷಕ್ಕೆ ಬಾಯ್ ಹೇಳಿದರು.