ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಾಲಿಂಗಪುರದಲ್ಲಿ ಪಕ್ಷೇತರ ಅಭ್ಯರ್ಥಿ ಅಂಬಾದಾಸ್ ಕಾಮೂರ್ತಿ ಭರ್ಜರಿ ಪ್ರಚಾರ ನಡೆಸಿದರು. ಪ್ರಗತಿ ಚಿಂತಕ ಅಂಬಾದಾಸ್ ಕಾಮೂರ್ತಿ ಸಜ್ಜನ ಸೌಮ್ಯ ಸ್ವಭಾವವಾಗಿದ್ದು. ಮೇ ೧೦ರಂದು ಇವರಿಗೆ ಮತ ನೀಡುವ ಮೂಲಕ ಶಾಸಕರಾಗಿ ಆಯ್ಕೆ ಮಾಡಲು ಸಹಕರಿಸಬೇಕೆಂದು ಮತದಾರರಿಗೆ ಮನವಿ ಮಾಡಿದರು. ಪಕ್ಷೇತರ ಅಭ್ಯರ್ಥಿ ಅಂಬಾದಾಸ್ ಕಾಮೂರ್ತಿ ಮಾತನಾಡಿ ತೇರದಾಳ ಮತಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ. ಕ್ಷೇತ್ರದಲ್ಲಿ ಜನಪರ ಕಾರ್ಯಗಳನ್ನು ಮತ್ತಷ್ಟು ಅಭಿವೃದ್ಧಿ ಹೊಂದಬೇಕಾಗಿದೆ. ಮತಕ್ಷೇತ್ರದಲ್ಲಿ ನನಗೆ ವ್ಯಾಪಕ ಬೆಂಬಲ ಸಿಗುತ್ತಿದೆ ಎಂದರು.
ಹಿಂದೆಂದೂ ಕಾಣದಷ್ಟು ಮಾಲಿಂಗಪುರ ನಗರದಲ್ಲಿ ದೊಡ್ಡ ಪ್ರಮಾಣದ ಪ್ರಚಾರ ಸಭೆಯಲ್ಲಿ ಜನ ಸೇರುವುದು ಗಮನಿಸಿದರೆ ನನ್ನ ಗೆಲ್ಲುವು ನಿಶ್ಚಿತ ಎಂದರು. ಕಾಂಗ್ರೆಸ್ ಬಿಜೆಪಿಗೆ ಜನರು ಬೇಸತ್ತು ಸ್ವಯಂ ಪ್ರೇರಿತ ನೂರಾರು ಯುವಕರು ಧುರೀಣರು ನನಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಹಾಗಾಗಿ ಈ ಬಾರಿ ನನ್ನ ಕೆಲವು ಶತಸಿದ್ಧ ಎಂದು ಹೇಳಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ