ಕಡಲೂರು;- ಬಿಜೆಪಿ ವಿಷ ಸರ್ಪವಿದ್ದಂತೆ, ಅದನ್ನು ರಾಜ್ಯದಿಂದ ಅಟ್ಟಾಡಿಸಿ ಓಡಿಸಬೇಕು ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸರ್ಪವೊಂದು ಕಸದತೊಟ್ಟಿಯಿಂದ ನಮ್ಮ ಮನೆಗೆ ಪ್ರವೇಶಿಸಿದೆ. ನಾವು ಸರ್ಪವನ್ನು ನಿರ್ಮೂಲನೆ ಮಾಡಬೇಕಿದ್ದರೆ, ಮೊದಲಿಗೆ ಕಸ ಇರದಂತೆ ನೋಡಿಕೊಳ್ಳಬೇಕು. ಹೀಗಾಗಿ 2024ರ ಚುನಾವಣೆಯಲ್ಲಿ ತಮಿಳುನಾಡಿನಿಂದ ಬಿಜೆಪಿ ಮತ್ತು ಎಐಎಡಿಎಂಕೆ ಎರಡನ್ನೂ ನಿರ್ಮೂಲನೆ ಮಾಡಲು ಜನ ಅಣಿಯಾಗಬೇಕು. 2021ರಲ್ಲಿ ನಾವು ಗುಲಾಮರನ್ನು ವಿಧಾನಸಭೆಯಿಂದ ಗಂಟುಮೂಟೆ ಕಟ್ಟಿಕಳುಹಿಸಿದೆವು. ಇದೀಗ 2024ರಲ್ಲಿ ಅವರ ನಾಯಕರನ್ನೂ ಮನೆಗೆ ಕಳುಹಿಸುವ ಕೆಲಸ ಆಗಬೇಕು’ ಎಂದು ಹೇಳಿದರು.
ಜೊತೆಗೆ ಸನಾತನ ಧರ್ಮ ಕುರಿತ ತಮ್ಮ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡ ಉದಯನಿಧಿ, ‘ಕಳೆದ 100 ವರ್ಷಗಳಿಂದಲೂ ತಮಿಳುನಾಡಿನಲ್ಲಿ ಸನಾತನ ಧರ್ಮದ ಬಗ್ಗೆ ಧ್ವನಿ ಎತ್ತುತ್ತಲೇ ಬರಲಾಗುತ್ತಿದೆ. ಮುಂದಿನ 200 ವರ್ಷಗಳ ಕಾಲವೂ ನಾವು ಅದನ್ನು ಮುಂದುವರೆಸಲಿದ್ದೇವೆ’ ಎಂದು ಹೇಳಿದರು.