ಇಂದು ಬೆಳಿಗ್ಗೆ ಚಾರ್ಮಡಿ ಘಾಟ್ನಲ್ಲಿ ತೆರಳುತ್ತಿದ್ದ ಜನರಿಗೆ ಗಜರಾಜನ ದರ್ಶನವಾಗಿದೆ.
ಚಾರ್ಮಡಿ ಘಾಟ್ನ ರಸ್ತೆ ಮಧ್ಯೆದಲ್ಲಿ ಒಂಟಿ ಸಲಗ ಸೊಂಡಿಲಿನಲ್ಲಿ ಮರದ ದಿಂಬಿ ಹಿಡಿದು ನಿಂತಿದ್ದನು.
ಗಜರಾಜನ ಈ ಅವತಾರ ಕಂಡು ಜನರು ವಾಹನಗಳನ್ನು ಸೈಡ್ ಅಲ್ಲಿ ಪಾರ್ಕ್ ಮಾಡಿ, ಮೊಬೈಲ್ನಲ್ಲಿ ಆನೆಯ ಆರ್ಭಟವನ್ನು ಸೆರೆ ಹಿಡಿದಿದ್ದಾರೆ. ಈ ಒಂಟಿ ಸಲಗಕ್ಕೆ ಒಂಟಿ ಸಲಗಕ್ಕೆ ಮದವೇರಿರುವ ಶಂಕೆ ವ್ಯಕ್ತವಾಗಿದೆ.
ರಸ್ತೆ ಮಧ್ಯೆದಲ್ಲಿ ಒಂಟಿ ಸಲಗ ನಿಂತಿದ್ದರಿಂದ ಚಾರ್ಮಾಡಿ ಘಾಟ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇನ್ನು ಈ ಒಂಟಿ ಸಲಗ ಹಗಲು-ರಾತ್ರಿ ಎನ್ನದೆ ಉಪಟಳ ನೀಡುತ್ತಿದೆ. ಆದರೂ ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ.