ಬೆಂಗಳೂರು:- ಲಾಲ್ಬಾಗ್ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಆಧರಿಸಿ ಫ್ಲವರ್ ಶೋ 8 ನೇ ದಿನಕ್ಕೆ ಕಾಲಿಟ್ಟಿದ್ದು, ಜನತೆ ಮುಗಿ ಬಿದ್ದಿದ್ದಾರೆ.
ಒಂದೆಡೆ ಸಾಲು ಸಾಲು ರಜೆ ಇರುವ ಹಿನ್ನೆಲೆ ಫ್ಲವರ್ ಶೋ ನೋಡಲು ಮುಗಿ ಬಿದ್ದಿದ್ದಾರೆ.
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಹಿನ್ನಲೆ ಸಸ್ಯಕಾಶಿ ಲಾಲ್ಬಾಗ್ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಆಧರಿಸಿ ಫ್ಲವರ್ ಶೋ 8 ನೇ ದಿನಕ್ಕೆ ಕಾಲಿಟ್ಟಿದ್ದು, ಕುಟುಂಬ ಸಮೇತ ಲಕ್ಷಾಂತರ ಜನರು ಲಾಲ್ ಬಾಗ್ಗೆ ಭೇಟಿಕೊಟ್ಟು ಸಂಭಮಿಸಿದ್ದಾರೆ.
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಲಾಲ್ಬಾಗ್ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಜೀವನ ಚರಿತ್ರೆ ಅನಾವರಣಗೊಂಡು ಎಂಟನೇ ದಿನಕ್ಕೆ ಕಾಲಿಟ್ಟಿದೆ. ಅಲ್ಲದೇ ನಿನ್ನೆ 78ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಲಾಲ್ಬಾಗ್ನತ್ತ ಜನ ಸಾಗರವೆ ಹರಿದು ಬಂದಿತ್ತು. ಮಕ್ಕಳು, ಪೋಷಕರು, ಯುವ ಜನರು, ವೃದ್ಧರೂ ಸೇರಿದಂತೆ ಎಲ್ಲರೂ ಸೆಲ್ಫಿಗೆ ಫೋಸ್ಕೊಟ್ಟು ಸಖತ್ ಎಂಜಾಯ್ ಮಾಡಿದ್ದಾರೆ.
ಇದುವರೆಗೆ 1 ಕೋಟಿ 3 ಲಕ್ಷ 76 ಸಾವಿರ ರೂಪಾಯಿ ಆದಾಯ ಹರಿದು ಬಂದಿದೆ. ಕಳೆದ 8 ದಿನಗಳಲ್ಲಿ 3 ಲಕ್ಷ ಜನರು ಭೇಟಿ ನೀಡಿದ್ದಾರೆ. ನಿನ್ನೆ ಒಂದು ದಿನ ಸಾಯಂಕಾಲ 4 ಗಂಟೆ ಸಮಯಕ್ಕೆ 1 ಲಕ್ಷ 15 ಸಾವಿರದಷ್ಟು ಜನರು ಭೇಟಿ ನೀಡಿದ್ದರು.
ಈ ಬಗ್ಗೆ ಲಾಲ್ಬಾಗ್ನ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಮಾತನಾಡಿ, ನಿನ್ನೆ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಬೆಳಿಗ್ಗೆ 6 ಗಂಟೆಯಿಂದ ಜನರು ಭೇಟಿ ನೀಡಿದ್ದರು. ಸಂಜೆ 4 ಗಂಟೆ ಸಮಯಕ್ಕೆ 1.5 ಲಕ್ಷ ಜನರು ಭೇಟಿ ನೀಡಿದ್ದಾರೆ ಎಂದು ಹೇಳಿದ್ದಾರೆ
ಒಟ್ಟಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ರಜೆ ಇದ್ದ ಕಾರಣ ಪ್ಲವರ್ ಶೋ ಗೆ ಲಗ್ಗೆ ಇಟ್ಟ ಸಿಲಿಕಾನ್ ಸಿಟಿ ಮಂದಿ ಸಖತ್ ಎಂಜಾಯ್ ಮಾಡಿದ್ದಾರೆ.