ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕರುನಾಡು ಮಾತ್ರವಲ್ಲ ಪರಭಾಷೆಯ ಮಂದಿಯೂ ಪ್ರತಿಕ್ರಿಯೆ ನೀಡಿದ್ದಾರೆ. ಮೊಮ್ಮಗ ಮಾಡಿದ ಕೆಲಸದಿಂದು ಮಾಜಿ ಪ್ರಧಾನಿ ದೇವೇಗೌಡ ಅವರ ಹೆಸರಿಗೂ ಕಳಂಕ ಉಂಟಾಗಿದೆ. ಘಟನೆಯ ಕುರಿತು ನಟ ಜಗ್ಗೇಶ್ ಮಾತನಾಡಿದ್ದಾರೆ.
ನಟ ಜಗ್ಗೇಶ್ ಅವರು ಹೆಣ್ಣಿನ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾದ ಪೋಸ್ಟ್ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜಗ್ಗೇಶ್ ಹೆಣ್ಣಿನ ಬಗ್ಗೆ ಕೆಲ ಸಾಲು ಬರೆದುಕೊಂಡಿ ಇದನ್ನು ನೋಡಿದರೆ ಪ್ರಜ್ವಲ್ ರೇವಣ್ಣ ಅವರನ್ನೇ ಗಮನದಲ್ಲಿಟ್ಟುಕೊಂಡು ಬರೆದಿದ್ದಾರೆ ಎಂದು ಊಹಿಸುವಂತಿದೆ.
ಹೆಣ್ಣು ದೇವರ ಪ್ರತಿರೂಪ ತನ್ನ ಸೃಷ್ಠಿಯ ಕಾರ್ಯ ಭೂಲೋಕದಲ್ಲಿ ಹೆಣ್ಣಿಂದ ಮಾಡಿಸುತ್ತಾನೆ. ಹಾಗಾಗಿ ಹೆಣ್ಣುಕುಲಕ್ಕೆ ವಿಶೇಷ ಶಕ್ತಿ ಬ್ರಹ್ಮಾಂಡದಲ್ಲಿ…ಹೆಣ್ಣು ಮಗಳು ಮಡದಿ ತಾಯಿ ರೂಪ ಹೊಂದಿ ಮನುಕುಲದ ಉದ್ಧಾರಕ್ಕೆ ಜನಿಸಿದ ಮಾತೃ ಸ್ವರೂಪಿಣಿ ಅರ್ಥಾತ್ ದೈವ ಸ್ವರೂಪ. ಇಂಥ ಹೆಣ್ಣುಕುಲವ ಶೋಷಣೆ ಯಾ ದುಃಖ ಯಾ ಅಪಮಾನ ಯಾ ಮಾನಭಂಗ ಮಾಡುವ ಯಾವ ನರನು ಉದ್ಧಾರವಾದ ಇತಿಹಾಸವಿಲ್ಲ ಎಂದಿರುವ ಜಗ್ಗೇಶ್ ಯಾರು ಯಾವ ಮನೆಯಲ್ಲಿ ಹೆಣ್ಣುಕುಲಕ್ಕೆ ಅಕ್ಕ-ತಂಗಿ ತಾಯಿ-ಮಡದಿ ಮಗಳ ರೂಪದಲ್ಲಿ ಗೌರವಿಸುತ್ತಾನೋ, ಆ ಮನುಷ್ಯನ ಜೇವನ ಮನೆತನ ಸಂಕಷ್ಟವಿಲ್ಲದೆ ನಂದಗೋಕುಲ ಆಗುತ್ತದೆ ಹಾಗು ಆ ಮನೆತನದಲ್ಲಿ ಆ ಲಕ್ಕ್ಷ್ಮೀ ಲಕ್ಷ್ಮೀಯಾಗಿ ಪರಿವರ್ತನೆ ಆಗುತ್ತಾಳೆ ಎಂದಿದ್ದಾರೆ.
ಮುಂದುವರೆದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಜಗ್ಗೇಶ್, ಯಾರು ಇಂಥ ಶ್ರೇಷ್ಠ ಹೆಣ್ಣುಕುಲ ಅಪಮಾನ ಅವಮಾನ ಅತ್ಯಾಚಾರ ಮಾಡುತ್ತಾನೆ ಆ ಮನೆತನ ಸರ್ವನಾಶ ಆಗುತ್ತದೆ ಎಂದಿದ್ದಾರೆ. ಇಷ್ಟೇ ಅಲ್ಲ ಹೆಣ್ಣುಕುಲ ಗೌರವಿಸುವ ಶ್ರೇಷ್ಠ ದೇಶ ನಮ್ಮದು. ದೇಶಕ್ಕೂ ಮಾತೆ ಸ್ಥಾನ ನೀಡಿದವರು ನಮ್ಮ ಸನಾತನರು. ಇಂಥ ದೇಶವಾಸಿಗಳು ಹೆಣ್ಣುಕುಲ ಗೌರವಿಸಿ. ಸರ್ವಸ್ತ್ರೀಯರಲ್ಲೂ ತಾಯಿ ಕಾಣಿರಿ ಎಂದು ಕೂಡ ಅಕ್ಷರದ ಮೂಲಕ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ – ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮೊಮ್ಮಗ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಅಣ್ಣನ ಮಗ. ನೂರಾರು ಸ್ಪಷ್ಟ ವೀಡಿಯೊಗಳು ಬಹಿರಂಗವಾಗಿ ಹೊರಬಂದ ನಂತರ ಅತ್ಯಾಚಾರ ಮತ್ತು ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದುರು ದಾಖಲಾಗಿದ್ದು, ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ.