ಹೃದಯಕ್ಕೆ ಆಮ್ಲಜನಕಭರಿತ ರಕ್ತದ ಪರಿಚಲನೆಗೆ ಅಡ್ಡಿಯುಂಟಾದಾಗ ಹೃದಯಾಘಾತ ಸಂಭವಿಸುತ್ತದೆ. ಪರಿಧಮನಿಯ ಕಾಯಿಲೆ ಶುರುವಾಗುತ್ತದೆ. ಪರಿಧಮನಿ ಫಿಟ್ನೆಸ್ ಮತ್ತು ಆಹಾರದಲ್ಲಿ ಜಾಗರೂಕರಾಗಿದ್ದರೂ ಬೇರೆ ಸಮಸ್ಯೆಯಿಂದ ಹೃದಯ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಅತಿಯಾದ ಒತ್ತಡ ಕೂಡ ಇದ್ದಕ್ಕೆ ಕಾರಣ. ಇದಲ್ಲದೆ ಕುಟುಂಬದ ಹಿನ್ನಲೆ ಕೂಡ ಮಹತ್ವ ಪಡೆಯುತ್ತದೆ.
ಕುಟುಂಬಸ್ಥರದಲ್ಲಿ ಈ ಖಾಯಿಲೆಯಿದ್ದರೆ ವಂಶಪಾರಂಪರ್ಯವಾಗಿ ಇದು ಬರುತ್ತದೆ. ಸರಿಯಾದ ದೇಹ ತೂಕ ಕಾಪಾಡುವುದು, ಬೊಜ್ಜು ಹೆಚ್ಚಾಗದಂತೆ ನೋಡಿಕೊಳ್ಳುವುದು, ಧೂಮಪಾನ ಹಾಗೂ ಮದ್ಯಪಾನದಂತಹ ಕೆಟ್ಟ ಚಟಗಳಿಂದ ದೂರ ಇರುವುದರ ಜೊತೆಗೆ, ಬಾಯಿಗೆ ರುಚಿ ನೀಡುವ ಕೆಲವೊಂದು ಆಹಾರಗಳಿಂದ ದೂರವಿದ್ದರೆ, ಮಾತ್ರ ಹೃದಯವನ್ನು ಜೋಪಾನವಾಗಿ ಜೋಪಾನವಾಗಿಡುವಲ್ಲಿ ಸಹಕಾರಿಯಾಗಲಿದೆ.
ಒಣಫಲಗಳು ಅಥವಾ ಡ್ರೈಫ್ರೂಟ್ಸ್
- ಒಣಫಲಗಳು ಅಥವಾ ಡ್ರೈಫ್ರೂಟ್ಸ್ಗಳು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ವಿಚಾರ ನಮಗೆಲ್ಲಾ ಗೊತ್ತೇ ಇದೆ ಅಲ್ವಾ? ಆದರೆ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ ಇರುವವರು ಕೆಲವೊಂದು, ಒಣ ಫಲಗಳಿಂದ ದೂರ ಇರುವುದು ಅತ್ಯಗತ್ಯ!
- ಉದಾಹರಣೆಗೆ ಹೇಳುವುದಾದರೆ, ಕೆಲವೊಂದು ಒಣಫಲಗಳಾದ ಗೋಡಂಬಿ ಬೀಜಗಳು, ಖರ್ಜೂರ, ಒಣ ದ್ರಾಕ್ಷಿಯಂತಹ ಒಣ ಹಣ್ಣುಗಳಲ್ಲಿ ಕ್ಯಾಲೋರಿ ಪ್ರಮಾಣವು ಹೆಚ್ಚಾಗಿ ಕಂಡು ಬರುವುದರಿಂದ, ಇದರಿಂದ, ಆದಷ್ಟು ದೂರವಿರಬೇಕು.
- ಆದಷ್ಟು ಹೃದಯಕ್ಕೆ ಸ್ನೇಹಿ ಆಗಿರುವ ಒಣಫಲಗಳಾದ, ವಾಲ್ನಟ್ ಮತ್ತುನೆನೆಸಿಟ್ಟ ಬಾದಾಮಿ ಬೀಜಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಯಾಕೆಂದ್ರೆ ಇವುಗಳಲ್ಲಿ ಕ್ಯಾಲೋರಿ ಅಂಶಗಳು ಕಂಡು ಬರುವುದಿಲ್ಲ. ಅಷ್ಟೇ ಅಲ್ಲದೆ ಒಮೆಗಾ-3 ಕೊಬ್ಬಿನಾಮ್ಲ ಹಾಗೂ ನಾರಿನಾಂಶವು ಇದರಲ್ಲಿ ಹೆಚ್ಚಾಗಿ ಕಂಡು ಬರುವುದರಿಂದ, ಇವು ಹೃದಯ ಕಾಯಿಲೆ ಇರುವ ರೋಗಿಗಳಿಗೆ ತುಂಬಾ ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುವರು.
ಮಾವಿನ ಹಣ್ಣು ಹಾಗೂ ಬಾಳೆಹಣ್ಣು ಜಾಸ್ತಿ ತಿನ್ನಬಾರದು!
- ನಮಗೆಲ್ಲಾ ಗೊತ್ತೇ ಇರುವ ಹಣ್ಣುಗಳು ಹಾಗೂ ತರಕಾರಿಗಳು, ಮನುಷ್ಯನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇವುಗಳಲ್ಲಿ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ನೈಸರ್ಗಿಕವಾಗಿ ಸಿಗುವುದರಿಂದ, ಇವುಗಳಿಂದ ಆರೋಗ್ಯಕ್ಕೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ನಾವು ಹಲವು ಬಾರಿ ಓದಿದೆವೆ ಹಾಗೂ ಕೇಳಿದ್ದೇವೆ ಅಲ್ಲವೇ?
- ಆದರೆ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಇರುವವರು ಸ್ವಲ್ಪ ಆಲೋಚನೆ ಮಾಡ ಬೇಕಾಗುತ್ತದೆ. ಯಾಕೆಂದರೆ ಈ ಸಮಸ್ಯೆ ಇರುವವರು ಕೆಲವೊಂದು ಹಣ್ಣುಗಳಿಂದ, ದೂರ ಇರಬೇಕಾಗುತ್ತದೆ.
- ಉದಾಹರಣೆಗೆ ಹೇಳುವುದಾದರೆ ಮಾವಿನ ಹಣ್ಣು ಮತ್ತು ಬಾಳೆಹಣ್ಣು. ಇದಕ್ಕೆ ಮುಖ್ಯ ಕಾರಣ ಈ ಹಣ್ಣುಗಳಲ್ಲಿ ಅಧಿಕ ಮಟ್ಟದ ಕ್ಯಾಲೋರಿ ಅಂಶ! ಹೀಗಾಗಿ ಹೃದಯ ಸಂಬಂಧಿ ಕಾಯಿಲೆಗಳು ಇರುವವರಿಗೆ ಇದನ್ನು ಆಹಾರ ಕ್ರಮದಿಂದ ದೂರವಿಡಬೇಕು. ಇದನ್ನು ಯಾವಾಗಲೊಮ್ಮೆ ಸೇವನೆ ಮಾಡಬಹುದು. ಯಾವುದಕ್ಕೂ ಈ ಹಣ್ಣುಗಳನ್ನು ತಿನ್ನುವ ಮುನ್ನ ನಿಮ್ಮ ವೈದ್ಯರ ಬಳಿ ಒಮ್ಮೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಂಡರೆ ಒಳ್ಳೆಯದು.
ಮಾಂಸಾಹಾರಿ ಆಹಾರ
- ಹೃದಯ ಸಂಬಂಧಿ ಕಾಯಿಲೆ ಇರುವಂತಹವರು, ಆದಷ್ಟು ನಾನ್ ವೆಜ್ಗಳಿಂದ ದೂರವಿದ್ದರೆ ಬಹಳ ಒಳ್ಳೆಯದು ಬೀಫ್, ಗ್ರಿಲ್ ಚಿಕನ್, ಇಲ್ಲಾಂದ್ರೆ ಕೊಬ್ಬಿನಾಂಶ ಹೆಚ್ಚಿರುವ ಮಾಂಸಗಳಿಂದ ದೂರ ಇದ್ದರೆ ಒಳ್ಳೆಯದು. ಪ್ರಮುಖವಾಗಿ ಇವುಗಳನ್ನು ರೆಡಿ ಮಾಡುವ ಸಂದರ್ಭದಲ್ಲಿ
- ಕೊಬ್ಬಿನಾಂಶವಿರುವ ಸಾಮಗ್ರಿಗಳನ್ನು ಬಳಕೆ ಮಾಡುವುದರಿಂದ, ಹೃದಯದ ಸಮಸ್ಯೆ ಇರುವ ರೋಗಿಗಳಿಗೆ ತುಂಬಾನೇ ಅಪಾಯಕಾರಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
ನೆನೆಪಿಡಿ: ಹೃದಯದ ಸಮಸ್ಯೆ ಇರುವವರು, ಆದಷ್ಟು ಕಡಿಮೆ ಕೊಬ್ಬಿನಾಂಶ ಇರುವ ಆಹಾರ ಗಳನ್ನು ಸೇವನೆ ಮಾಡುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳು ಹತೋಟಿಗೆ ಬಂದು ನಮ್ಮ ಹೃದಯ ರಕ್ತನಾಳದ ಸಮಸ್ಯೆಗಳು ಕಡಿಮೆ ಆಗುತ್ತವೆ.
ಸಕ್ಕರೆ ಮತ್ತು ಉಪ್ಪು
- ಸಕ್ಕರೆ ಮತ್ತು ಉಪ್ಪು ಈ ಇಬ್ಬರು ಅಣ್ಣತಮ್ಮಂದಿರು ಹೃದಯ ಸಮಸ್ಯೆ ಇರುವವರ ಆರೋಗ್ಯಕ್ಕೆ ದೊಡ್ಡ ವಿಲನ್ ಎಂದರೆ ತಪ್ಪಾಗಲಾರದು! ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರು ವವರು ಆದಷ್ಟು ಉಪ್ಪು ಮತ್ತು ಸಕ್ಕರೆಯಿಂದ ದೂರವಿರಬೇಕು.
- ಯಾಕೆಂದ್ರೆ ಅಧಿಕ ರಕ್ತ ದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉಪ್ಪು ಹಾಗೂ ಸಕ್ಕರೆ ಅಂಶ ಇರುವ ಆಹಾರ ಪದಾರ್ಥಗಳು ಒಳ್ಳೆಯದಲ್ಲ, ಇದರಿಂದ ಹೃದಯ ಕಾಯಿಲೆಗೆ ಕಾರಣವಾಗಬಹುದು. ಹೀಗಾಗಿ ಹೃದಯ ಸಂಬಂಧಿ ಕಾಯಿಲೆ ಇರುವವರು ಸಕ್ಕರೆ ಮತ್ತು ಉಪ್ಪು ಇವುಗಳು ಎರಡರರಿಂದ ಕೂಡ ದೂರ ಇದ್ದರೆ ಒಳ್ಳೆಯದು.