ಪೌಷ್ಟಿಕಾಂಶದ ಆಗರವಾಗಿರುವ ನುಗ್ಗೇಕಾಯಿಯ ಸಿಪ್ಪೆ ಹಾಗೂ ದಂಟು ಎರಡೂ ಬಹುಪಯೋಗಿ.
ಪಲ್ಯ, ಸಾಂಬಾರು ಹಾಗೂ ರೊಟ್ಟಿಯ ರೂಪದಲ್ಲಿ ಇವುಗಳನ್ನು ಸೇವಿಸಬಹುದು. ನಿಯಮಿತವಾಗಿ ಇದನ್ನು ಸೇವಿಸುತ್ತಿದ್ದರೆ ನಿಮಗೆ ಹಿಮೋಗ್ಲೋಬಿನ್ ಕೊರತೆಯ ಸಮಸ್ಯೆಯೇ ಕಾಡದು.
ನಾರಿನಂಶ ಹೇರಳವಾಗಿರುವ ನುಗ್ಗೇಕಾಯಿಯನ್ನು ಮಲಬದ್ಧತೆ ಅಥವಾ ಪೈಲ್ಸ್ ಸಮಸ್ಯೆ ಇರುವವರು ವಾರದಲ್ಲಿ ಮೂರು ಬಾರಿ ಸೇವಿಸುತ್ತಿದ್ದರೆ ವೈದ್ಯರನ್ನು ಕಾಣಬೇಕಾದ ಅಗತ್ಯವೇ ಬಾರದು.
ಅಧ್ಯಯನವೊಂದರ ಪ್ರಕಾರ ನುಗ್ಗೇಕಾಯಿಯಿಂದ ಲಿವರ್ ಸಮಸ್ಯೆಯನ್ನು ಹೋಗಲಾಡಿಸಬಹುದು. ಯಕೃತ್ ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವ ಗುಣ ಇದಕ್ಕಿದೆ. ಹೊಟ್ಟೆಯ ಸಮಸ್ಯೆಗಳನ್ನು ದೂರ ಮಾಡಿ ಸೋಂಕು ನಿವಾರಕ ಬ್ಯಾಕ್ಟೀರಿಯಾಗಳು ಬೆಳೆಯದಂತೆಯೂ ಇದು ನೋಡಿಕೊಳ್ಳುತ್ತದೆ.